ಕರ್ನಾಟಕ

karnataka

ETV Bharat / bharat

ಪಾಲಮುರು ಕಾಮಗಾರಿಯಲ್ಲಿ ಅವಘಡ: ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರು ಸಾವು - ಪಾಲಮುರು ರಂಗಾರೆಡ್ಡಿ ಏತ ನೀರಾವರಿ ಕಾಮಗಾರಿ

ಪಾಲಮುರು ರಂಗಾರೆಡ್ಡಿ ಏತ ನೀರಾವರಿ ಕಾಮಗಾರಿಯಲ್ಲಿ ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Five Labors Died in palamuru lift works
ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರು ಸಾವು

By

Published : Jul 29, 2022, 10:24 AM IST

ಹೈದರಾಬಾದ್​​:ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯ ಪಾಲಮುರು ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಕ್ರೇನ್ ಸಹಾಯದಿಂದ ಪಂಪ್ ಹೌಸ್‌ಗೆ ಇಳಿಯುವಾಗ ತಂತಿ ತುಂಡಾಗಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತೆಲಂಗಾಣ ಸರ್ಕಾರ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಪಾಲಮುರು ಲಿಫ್ಟಿಂಗ್ ಯೋಜನೆಯ ಕಾಮಗಾರಿ ನಾಗರ ‌ಕರ್ನೂಲ್ ಜಿಲ್ಲೆಯ ಕೊಲ್ಹಾಪುರ ಮಂಡಲದ ರೆಗುಮಾನ ಗಡ್ಡಾದಲ್ಲಿ ನಡೆಯುತ್ತಿದೆ. ನಿರ್ಮಾಣ ಹಂತದಲ್ಲಿದ್ದ ಪಾಲಮುರು ರಂಗಾರೆಡ್ಡಿ ಪ್ಯಾಕೇಜ್-1ರಲ್ಲಿ ಈ ಅನಾಹುತ ಘಟಿಸಿದೆ. ಮೃತರನ್ನು ಬಿಹಾರ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಹೈದರಾಬಾದ್‌ನ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜಸ್ಥಾನದಲ್ಲಿ ಪತನಗೊಂಡು ಹೊತ್ತಿ ಉರಿದ ಮಿಗ್​​-21 ಯುದ್ಧ ವಿಮಾನ: ಇಬ್ಬರು ಪೈಲಟ್ಸ್​ ಸಾವು

ABOUT THE AUTHOR

...view details