ಹೈದರಾಬಾದ್:ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೌಟಕೂರು ಮಂಡಲದಲ್ಲಿ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಕಾರಿನಲ್ಲಿ ಹೊರಟ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ಮೇಡಕ್ ಜಿಲ್ಲೆಯ ರಂಗಂಪೇಟೆ ಗ್ರಾಮದ ನಿವಾಸಿಗಳಾದ ಪದ್ಮ (30) ಹಾಗೂ ಅಂಬಾದಾಸ್ (40) ದಂಪತಿ ತಮ್ಮ ಮಗು ವಿವೇಕ್ (6)ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮಗುವಿಗೆ ಆರಾಮಿಲ್ಲದ ಕಾರಣ ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಅವರ ಜೊತೆಗೆ ಸಂಬಂಧಿಕರಾದ ಲುಕಾ ಮತ್ತು ದೀವೆನಾ ಲಾಸೊ ಕೂಡ ಇದ್ದರು. ಆಸ್ಪತ್ರೆಯಿಂದ ಮನೆಗೆ ಮರಳುವಾಗ ಕೂಟಕೂರು ಸಮೀಪ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.