ನಂದೂರ್ಬಾರ್(ಮಹಾರಾಷ್ಟ್ರ):ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ನಂದೂರ್ಬಾರ್ - ತಲೋಡಾ ತಾಲೂಕು ರಸ್ತೆಯಲ್ಲಿ ನಡೆದಿದೆ. ತುಲಾಜಾ ಮೂಲದ ಮೂವರು ಹಾಗೂ ತಲೋಡಾ ಮೂಲದ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ದಾರಾಸಿಂಗ್ ಜಬೋರ್ (48), ಮದನ್ ದೀಪಾವಳಿ ನಾಯಕ್ (50), ಅಮಿತ್ ಮಗನ್ ನಾಯಕ್(10), ಉಮೇಶ್ ಶಾಂತಿಲಾಲ್ ಚವಾನ್, ಸುನಂದ ಚವಾನ್ ಪೂಜಾ ಎಂದು ಗುರುತಿಸಲಾಗಿದೆ.