ಕಾಂಗ್ಪೋಕ್ಪಿ (ಮಣಿಪುರ):ಜನಸಮೂಹದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಐವರನ್ನು ಹತ್ಯೆ ಮಾಡಿದ್ದಾರೆ ಎಂದು ಮಣಿಪುರದ ಪೊಲೀಸ್ ಮಹಾನಿರೀಕ್ಷಕ ಲುನ್ಸೆಹ್ ಕಿಪ್ಗೆನ್ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
ಕಾಂಗ್ಪೋಕ್ಪಿ ಜಿಲ್ಲೆಯ ಬಿ.ಗಮ್ನೋಮ್ ಗ್ರಾಮದಲ್ಲಿ ಘಟನೆ ನಡೆದಿದೆ. ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದ ಇಬ್ಬರು ಉಗ್ರರ ಅಂತ್ಯಸಂಸ್ಕಾರದ ವೇಳೆ ಕುಕಿ ಭಯೋತ್ಪಾದಕ ಸಂಘಟನೆಯ ಸದಸ್ಯರು ಅಲ್ಲಿ ನೆರೆದಿದ್ದ ಜನರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದರು.
ಈ ವೇಳೆ ಬಿ.ಗಮ್ನೋಮ್ ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ಪಲಾಯನ ಮಾಡಿದ್ದಾರೆ. ಭದ್ರತಾ ಪಡೆಗಳು ತಮ್ಮ ಸಂಘಟನೆಯ ಸದಸ್ಯರನ್ನು ಕೊಂದ ಕಾರಣಕ್ಕೆ ಈ ರೀತಿಯ ಪ್ರತೀಕಾರವನ್ನು ಕುಕಿ ಭಯೋತ್ಪಾದಕ ಸಂಘಟನೆ ತೀರಿಸಿಕೊಂಡಿದೆ ಎಂದು ತಿಳಿದುಬಂದಿದೆ.