ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ: ವಾಹನಕ್ಕೆ ಹೈಟೆನ್ಶನ್ ತಂತಿ​ ಸ್ಪರ್ಶ; ಐವರು ಸಾವು

ವಾಹನಕ್ಕೆ ವಿದ್ಯುತ್​ ಸ್ಪರ್ಶಿಸಿ 5 ಮಂದಿ ಅಸುನೀಗಿದ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

Five kanwariyas electrocuted in UPs Meerut
Five kanwariyas electrocuted in UPs Meerut

By

Published : Jul 16, 2023, 11:05 AM IST

Updated : Jul 16, 2023, 12:34 PM IST

ಮೀರತ್​​ (ಉತ್ತರ ಪ್ರದೇಶ): ಕನ್ವರ್​ ಯಾತ್ರೆ ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದ ವಾಹನಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿದ್ದು, ಐದು ಮಂದಿ ಸಾವನ್ನಪ್ಪಿರುವ ಘಟನೆ ಮೀರತ್​ನ ಭಾವನ್​ಪುರದಲ್ಲಿ ಶನಿವಾರ ಸಂಭವಿಸಿತು. ಕನ್ವರಿಯಾ ಭಕ್ತರಿದ್ದ ತಂಡ ರಾತ್ರಿ 8 ಗಂಟೆಯ ಸುಮಾರಿಗೆ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಭಾವನ್‌ಪುರ ಪ್ರದೇಶದಲ್ಲಿ ಹೈಟೆನ್ಶನ್ ಓವರ್‌ಹೆಡ್ ವೈರ್‌ಗೆ ವಾಹನ ಸ್ಪರ್ಶಿಸಿದೆ. ಪರಿಣಾಮ ವಾಹನದೊಳಗಿದ್ದ 21 ಮಂದಿಗೂ ಶಾಕ್​ ಹೊಡೆದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ 5 ಮಂದಿ ಸಾವನ್ನಪ್ಪಿದ್ದು, ಇನ್ನುಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ದೀಪಕ್ ಮೀನಾ ತಿಳಿಸಿದರು.

ಗ್ರಾಮಸ್ಥರ ಪ್ರತಿಭಟನೆ : ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ವಿದ್ಯುತ್​​ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಸ್ಪಿ ದೇಹತ್ ಕಮಲೇಶ್​ ಬಹದ್ದೂರ್ ಮಾಹಿತಿ ನೀಡಿದರು.

ವಿದ್ಯುತ್​ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸಾವು:ಉತ್ತರ ಪ್ರದೇಶದ ವೈಶಾಲಿ ಜಿಲ್ಲೆಯ ಜಂಡಾಹ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರು ವಿದ್ಯುತ್​ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿತ್ತು. ಬಾಲಪ್ರಸಾದ್​ ಸಿಂಗ್​ ಎಂಬವರ ಪತ್ನಿ ಕುಸುಮ್​ ದೇವಿ ಮನೆಯ ಅಂಗಳದಲ್ಲಿ ಬಟ್ಟೆ ಒಣಹಾಕಲು ಹೋಗಿದ್ದು, ಕರೆಂಟ್​ ಶಾಕ್​ ಹೊಡೆದಿದೆ. ತಾಯಿಯ ಕಿರುಚಾಟ ಕೇಳಿ ಮನೆಯೊಳಗಿದ್ದ ಮಗ ಧರ್ಮೇಂದ್ರ ಕುಮಾರ್​ ರಕ್ಷಿಸಲು ಹೋಗಿದ್ದಾರೆ. ಆಗ ಅವರಿಗೂ ವಿದ್ಯುತ್​ ಸ್ಪರ್ಶಿಸಿದೆ. ಇದಾದ ನಂತರ ಪತ್ನಿ ಸುಮನ್​ ಧಾವಿಸಿದ್ದು, ಅವರೂ ಕೂಡಾ ವಿದ್ಯುತ್​ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಮಲಗಿದ್ದಲ್ಲಿಯೇ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರ ಅನುಮಾನಾಸ್ಪದ ಸಾವು!

Last Updated : Jul 16, 2023, 12:34 PM IST

ABOUT THE AUTHOR

...view details