ಝಲಾವಾರ್(ರಾಜಸ್ಥಾನ):ಝಲಾವಾರ್ ಜಿಲ್ಲೆಯ ಅಕೋಡಿಯಾ ಎಂಬಲ್ಲಿ ಕಂಟೈನರ್, ಬೈಕ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ವೇಗವಾಗಿ ಬರುತ್ತಿದ್ದ ಕಂಟೈನರ್ ನಿಯಂತ್ರಣ ತಪ್ಪಿ ಬೈಕ್ ಮೇಲೆ ಹರಿದಿದೆ. ಬಳಿಕ ಕಾರಿಗೂ ಡಿಕ್ಕಿಯಾಗಿದ್ದು, ಮೂವರು ಬೈಕ್ ಸವಾರರು ಮತ್ತು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಭೀಕರ ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆ್ಯಂಬುಲೆನ್ಸ್ ಸಹಾಯದಿಂದ ಜಲಾವರ್‌ನ ಎಸ್‌ಆರ್‌ಜಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು, ಬೈಕ್ಗೆ ಗುದ್ದಿದ ಬಳಿಕ ಕಂಟೈನರ್ ಚಾಲಕ ಪರಾರಿಯಾಗಿದ್ದಾನೆ. ಕಂಟೈನರ್ ಎಲ್ಲಿಂದ ಬರುತ್ತಿತ್ತು, ಎಲ್ಲಿಗೆ ಹೋಗುತ್ತಿತ್ತು, ಯಾರಿಗೆ ಸೇರಿದೆ ಎಂಬದನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಶುರು ಮಾಡಿದ್ದಾರೆ.
ಟ್ವೀಟ್ ಮಾಡಿ ಸಿಎಂ ಸಂತಾಪ:ಝಲಾವಾರ್ ರಸ್ತೆ ದುರಂತದ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಝಲಾವರ್‌ನ ಅಸ್ನಾವರ್ ಪ್ರದೇಶದ ಎನ್‌ಹೆಚ್ 52 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 5 ಜನರ ಸಾವು ತುಂಬಾ ದುಃಖಕರವಾಗಿದೆ. ಅಗಲಿದ ಕುಟುಂಬ ಸದಸ್ಯರಿಗೆ ನನ್ನ ತೀವ್ರ ಸಂತಾಪಗಳು ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಓದಿ:ನಡುರಸ್ತೆಯಲ್ಲೇ ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣಿಗೆ; ಸುಮೋಟೋ ಕೇಸ್ ದಾಖಲಿಸಿಕೊಂಡ ಬೆಳಗಾವಿ ಪೊಲೀಸರು