ಕರ್ನಾಟಕ

karnataka

ETV Bharat / bharat

ಟೀ ಕುಡಿದು ಐವರು ಸಾವು.. ತಾನು ಮಾಡಿದ ಎಡವಟ್ಟಿನಿಂದಾಗಿ ಮಕ್ಕಳು - ಗಂಡನನ್ನು ಕಳೆದುಕೊಂಡ ಮಹಿಳೆ! - ಟೀ ಕುಡಿದು ತೀವ್ರ ಅಸ್ವಸ್ಥ

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಕೀಟನಾಶಕ ಔಷಧ ಬೆರೆಸಿದ ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಆಕೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಗಂಡ ಮತ್ತು ಮುದ್ದಾದ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಕಳೆದುಕೊಂಡಿದ್ದಾರೆ.

Five died after drinking poisonous tea  drinking poisonous tea in Uttara Pradesh  tragedy in Uttara Pradesh  same family member died  ಟೀ ಕುಡಿದು ಐವರು ಸಾವು  ಎಡವಟ್ಟಿನಿಂದಾಗಿ ಮಕ್ಕಳು ಗಂಡನನ್ನು ಕಳೆದುಕೊಂಡ ಮಹಿಳೆ  ಕೀಟನಾಶಕ ಔಷಧ ಬೆರೆಸಿದ ಚಹಾ  ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತ  ಜಿಲ್ಲೆಯಲ್ಲಿ ದುರಂತ ಘಟನೆ  ಹೆಂಡ್ತಿ ಮಾಡಿದ ತಪ್ಪಿಗೆ ಐದು ಜೀವಗಳು ಬಲಿ  ಟೀ ಕುಡಿದು ತೀವ್ರ ಅಸ್ವಸ್ಥ  ಟೀ ಪುಡಿ ಬದಲಿಗೆ ಕೀಟನಾಶಕ ಔಷಧ ಬಳಕೆ
ತಾನು ಮಾಡಿದ ಎಡವಟ್ಟಿನಿಂದಾಗಿ ಮಕ್ಕಳು-ಗಂಡನನ್ನು ಕಳೆದುಕೊಂಡ ಮಹಿಳೆ!

By

Published : Oct 28, 2022, 6:44 AM IST

ಮೈನ್‌ಪುರಿ, ಉತ್ತರಪ್ರದೇಶ :ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಹೆಂಡ್ತಿ ಮಾಡಿದ ತಪ್ಪಿಗೆ ಐದು ಜೀವಗಳು ಬಲಿಯಾಗಿವೆ. ಮನೆಯಲ್ಲಿ ಟೀ ಕುಡಿದು ತೀವ್ರ ಅಸ್ವಸ್ಥಗೊಂಡು ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ನಾಗ್ಲಾ ಕನ್ಹೈ ಗ್ರಾಮದಲ್ಲಿ ನಡೆದಿದೆ.

ಟೀ ಕುಡಿದು ಐವರು ಸಾವು: ಘಟನೆಯ ವಿವರಗಳ ಪ್ರಕಾರ, ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45) ಮನೆಯಲ್ಲಿ ಚಹಾ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಅವರೆಲ್ಲರನ್ನೂ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ರವೀಂದ್ರ ಸಿಂಗ್, ಶಿವಾಂಗ್ ಮತ್ತು ದಿವಾನ್ಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

ಸೊಬ್ರಾನ್ ಮತ್ತು ಶಿವಾನಂದನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಸೈಫಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅಲ್ಲಿಯೂ ಇಬ್ಬರೂ ಸಾವನ್ನಪ್ಪಿದರು.

ಟೀ ಪುಡಿ ಬದಲಿಗೆ ಕೀಟನಾಶಕ ಔಷಧ ಬಳಕೆ: ಶಿವಾನಂದನ ಪತ್ನಿ ಭತ್ತದ ಬೆಳೆಗೆ ಸಿಂಪರಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ್ದಾರೆ. ಇದನ್ನು ಕುಡಿದ ಆ ಐವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಕಮಲೇಶ್ ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

ಓದಿ:ಹೆದ್ದಾರಿ ಪಕ್ಕದ ಕಂಬಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬಕ್ಕೆ ಸೇರಿದ ಐವರು ಸ್ಥಳದಲ್ಲೇ ಸಾವು

ABOUT THE AUTHOR

...view details