ಜಮ್ಮು& ಕಾಶ್ಮೀರ: ಸಾಂಬಾ ಜಿಲ್ಲೆಯ ಜಮೋದಾ ಪ್ರದೇಶದ ಬಳಿ ವಾಹನವೊಂದು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ.
ಭೀಕರ ಅಪಘಾತ: ಆಳವಾದ ಕಮರಿಗೆ ಕಾರು ಬಿದ್ದು 5 ಮಂದಿ ದುರ್ಮರಣ! - ಆಳವಾದ ಕಮರಿಗೆ ಕಾರು ಬಿದ್ದು 5 ಮಂದಿ ದುರ್ಮರಣ
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರೊಂದು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಳವಾದ ಕಮರಿಗೆ ಬಿದ್ದ ಕಾರು
ಸಾಂಬಾದಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ನೋಂದಣಿ ಸಂಖ್ಯೆ (ಜೆಕೆ 01 ಯು-2233) ಹೊಂದಿರುವ ಕಾರು ಜಾಮೋಡಾ, ಸಾಂಬಾ ಬಳಿ ಆಳವಾದ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಹನದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕಾಲೇಜ್ನಿಂದ ಡಿಬಾರ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ