ಸುಕ್ಮಾ (ಚತ್ತೀಸ್ಗಢ ) : ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯ 206 ಕೋಬ್ರಾ ಬೆಟಾಲಿಯನ್‌ನ ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದು, ಏಳು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ.
ನಕ್ಸಲರಿಂದ ಐಇಡಿ ಸ್ಫೋಟ: ಓರ್ವ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ, 7 ಜನರಿಗೆ ಗಾಯ - ಚತ್ತೀಸ್ ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿ
ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ ಓರ್ವ ಸಿಆರ್ಫಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದು, 7 ಜನ ಗಾಯಗೊಂಡಿದ್ದಾರೆ.
ಚತ್ತೀಸ್ ಗಢದಲ್ಲಿ ನಕ್ಸಲರಿಂದ ಐಇಡಿ ಸ್ಪೋಟ
ಸುಕ್ಮಾ ಜಿಲ್ಲೆಯ ಚಿಂತಾಫುಗಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಸಿಆರ್‌ಪಿಎಫ್ ಕೋಬ್ರಾ 206 ಬೆಟಾಲಿಯನ್‌ನ ಓರ್ವ ಸೆಕೆಂಡ್-ಇನ್-ಕಮಾಂಡ್ ಅಧಿಕಾರಿ (2 ಐಸಿ) ಮತ್ತು ಒಬ್ಬ ಸಹಾಯಕ ಕಮಾಂಡೆಂಟ್ ಸೇರಿದ್ದಾರೆ ಎಂದು ಸಿಆರ್‌ಪಿಎಫ್ ಮಾಹಿತಿ ನೀಡಿದೆ.
TAGGED:
Naxal attack in Chattisgarh