ಮಧ್ಯಪ್ರದೇಶ :ಗುರುವಾರ ರಾತ್ರಿ ಜಬಲ್ಪುರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾದ ಹಿನ್ನೆಲೆ ಐವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
ಆಕ್ಸಿಜನ್ ಸಿಗದೆ ಜಬ್ಬಲ್ಪುರ ಆಸ್ಪತ್ರೆಯಲ್ಲಿ ಐವರು ಸೋಂಕಿತರು ಸಾವು - ಆಮ್ಲಜನಕ ಸಿಗದೇ ಐವರು ಸೋಂಕಿತರು ಸಾವು
ದುರದೃಷ್ಟವಶಾತ್ ಆಕ್ಸಿಜನ್ ಪೂರೈಕೆ ಪೈಪ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಒಟ್ಟು 82,268 ಸಕ್ರಿಯ ಪ್ರಕರಣಗಳಿವೆ..
ಜಬಲ್ಪುರ ಕೊರೊನಾ ಹಾಟ್ಸ್ಪಾಟ್ ಆಗಿದ್ದು, ಇಲ್ಲಿನ ಗೆಲಾಕ್ಸಿ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ. ಇನ್ನು, ಸೋಂಕಿತರು ಸಾವನ್ನಪ್ಪಿದ ಹಿನ್ನೆಲೆ ಅವರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ವಾಗ್ವಾದಕ್ಕಿಳಿದಿದ್ದು, ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸುವ ಆಸ್ಪತ್ರೆ ಆಡಳಿತ ಮಂಡಳಿ, ನಮ್ಮಲ್ಲಿ ಆಕ್ಸಿಜನ್ ಸ್ಟಾಕ್ ಇದೆ. ಆದರೆ, ದುರದೃಷ್ಟವಶಾತ್ ಆಕ್ಸಿಜನ್ ಪೂರೈಕೆ ಪೈಪ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಒಟ್ಟು 82,268 ಸಕ್ರಿಯ ಪ್ರಕರಣಗಳಿವೆ.