ಬಂಕಾ(ಬಿಹಾರ):ಬಿಹಾರದ ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಐವರು ಮಕ್ಕಳು ಸಜೀವ ದಹನವಾಗಿದ್ದಾರೆ. ಮಕ್ಕಳು ಸಾವನ್ನಪ್ಪಿರುವ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಏಕಾಏಕಿಯಾಗಿ ಸ್ಫೋಟಗೊಂಡಿರುವ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಆಟವಾಡುತ್ತಿದ್ದ ಐವರು ಮಕ್ಕಳು ದುರ್ಮರಣಕ್ಕೀಡಾಗಿವೆ. ಮೃತರನ್ನ ಅಂಕುಶ್ ಕುಮಾರ್(12), ಅಂಶು ಕುಮಾರಿ(8), ಸೀಮಾ ಕುಮಾರಿ(4), ಶಿವಾನಿ(6) ಮತ್ತು ಸೋನಿ(3) ಎಂದು ಗುರುತಿಸಲಾಗಿದೆ.