ಸಹರ್ಸಾ(ಬಿಹಾರ): ಹಳ್ಳದಲ್ಲಿ ಸ್ನಾನಕ್ಕೆಂದು ಇಳಿದಿದ್ದ ಐವರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸದರ್ ಪೊಲೀಸ್ ಠಾಣೆ ಪ್ರದೇಶದ ಬಸ್ತಿ ಪ್ರದೇಶದಲ್ಲಿ ನಡೆದಿದೆ. ಮೃತ ಮಕ್ಕಳು 8 ರಿಂದ 12 ವರ್ಷದೊಳಗಿನವರಾಗಿದ್ದಾರೆ.ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಹಳ್ಳದಲ್ಲಿ ಮುಳುಗಿ ಐವರು ಮಕ್ಕಳ ದುರ್ಮರಣ... ಪಾಲಕರ ಆಕ್ರಂದನ - ಹಳ್ಳದಲ್ಲಿ ಮುಳುಗಿ ಮಕ್ಕಳು ಸಾವು
ಹಳ್ಳದಲ್ಲಿ ಮುಳುಗಿ ಐವರು ಮಕ್ಕಳು ಸಾವನ್ನಪ್ಪಿದ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯ ಬಸ್ತಿ ಪ್ರದೇಶದಲ್ಲಿ ನಡೆದಿದೆ.
ಇಟ್ಟಿಗೆ ಗೂಡು ನಿರ್ಮಾಣಕ್ಕೆಂದು ಈ ಹಳ್ಳ ತೋಡಲಾಗಿತ್ತು ಎಂದು ಹೇಳಲಾಗ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು ಪ್ರತೀ ವರ್ಷವೂ ಈ ಹಳ್ಳದಲ್ಲಿ ಮುಳುಗಿ ಕನಿಷ್ಠ ಒಂದು ಮಗುವಾದರೂ ಸಾಯುತ್ತಿರುವ ಘಟನೆ ಮರುಕಳಿಸುತ್ತಿದೆ. ಈ ಜಾಗ ಅಷ್ಟೊಂದು ಅಸುರಕ್ಷಿತವಾಗಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಧಾವಿಸಿದ ಎಸ್‌ಡಿಒ ಶಂಭುನಾಥ್ ಘಟನೆ ಬಗ್ಗೆ ದುಃಖ ಹೊರಹಾಕಿದ್ದು, ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರಧನ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣರದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.