ಅಮೃತಸರ(ಪಂಜಾಬ್):ಸಹೋದ್ಯೋಗಿಗಳ ಮೇಲೆ ಬಿಎಸ್ಎಫ್ನ ಯೋಧನೋರ್ವ ಮನಬಂದಂತೆ ಗುಂಡು ಹಾರಿಸಿದ್ದು ಒಟ್ಟು ಐವರು ಮೃತಪಟ್ಟಿರುವ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ನಾಲ್ವರು ಸಹೋದ್ಯೋಗಿಗಳ ಕೊಂದು ತಾನೂ ಸಾವಿಗೀಡಾದ ಬಿಎಸ್ಎಫ್ ಯೋಧ - Firing By Colleague Four dead
ಪಂಜಾಬ್ನ ಅಮೃತಸರದ ಬಳಿ ಬಿಎಸ್ಎಫ್ನ ಯೋಧನೋರ್ವ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಒಟ್ಟು ಐವರು ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.
![ನಾಲ್ವರು ಸಹೋದ್ಯೋಗಿಗಳ ಕೊಂದು ತಾನೂ ಸಾವಿಗೀಡಾದ ಬಿಎಸ್ಎಫ್ ಯೋಧ 5 troops incl Ct Satteppa, have lost their lives, one critical. A court of inquiry has been ordered: BSF](https://etvbharatimages.akamaized.net/etvbharat/prod-images/768-512-14652692-thumbnail-3x2-raaa.jpg)
ಗುಂಡುಹಾರಿಸಿ ನಾಲ್ವರು ಸಹೋದ್ಯೋಗಿಗಳ ಕೊಂದು ಬಿಎಸ್ಎಫ್ ಯೋಧ ಮೃತ
ಅಮೃತಸರ ಬಿಎಸ್ಎಫ್ ಮುಖ್ಯಕಚೇರಿ 144 ಬಿಎನ್ ಖಾಸಾದಲ್ಲಿ ಘಟನೆ ನಡೆದಿದೆ. ಸತ್ತೆಪ್ಪ ಎಸ್ಕೆ ಎಂಬಾತ ಗುಂಡು ಹಾರಿಸಿದ್ದಾನೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸತ್ತೆಪ್ಪ ಸೇರಿ ಐವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.
ಈ ಬಗ್ಗೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತೆಪ್ಪ ಎಸ್ಕೆ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.