ಹೈದರಾಬಾದ್: ಲಾಕ್‌ಡೌನ್‌ನಿಂದಾಗಿ ಒಂದು ವರ್ಷದೊಳಗೆ 37 ಕೋಟಿ ರೂ. ವ್ಯವಹಾರ ಮಾಡಿದ ಫ್ಲೆಕ್ಸ್ನೆಟ್ನ ಸ್ಥಾಪಕ ದಂಪತಿಗಳು. ದಂಪತಿಗಳಾದ ರಿಯಾ ನಿಹಾಲ್ ಸಿಂಗ್ ಮತ್ತು ರೌನಕ್ ಸಿಂಗ್ ಮದುವೆಯಾದ ಮೂರೇ ತಿಂಗಳಿಗೆ 2020 ರಲ್ಲಿ ಲಾಕ್‌ಡೌನ್ ಆಗಿತ್ತು. ಹೀಗಾಗಿ ಮನೆಯಲ್ಲಿಯೇ ಜೊತೆಯಾಗಿ ಜಿಮ್ ಸ್ಥಾಪಿಸಿ ಈಗ ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದಾರೆ.
ಕೋವಿಡ್ ಸಾಂಕ್ರಾಮಿಕ ದಾಳಿಯ ಸಂದರ್ಭದಲ್ಲಿ ಎಲ್ಲರಲ್ಲೂ ಆರೋಗ್ಯ ಪ್ರಜ್ನೆ ಮೂಡಿತ್ತು. ಅದಕ್ಕಾಗಿ ಪ್ರತಿಯೊಬ್ಬರು ಯೋಗ ,ಜಿಮ್ನ್ನು ತಮ್ಮ ದೇಹದ ಫಿಟ್ನೆಸ್ಗಾಗಿ ಮಾಡತೊಡಗಿದರು. ಆದರೆ, ಇದೇ ಕೊರೊನದ ಪರಿಣಾಮ ಎಲ್ಲೆಡೆ ಲಾಕ್ ಡೌನ್ ಕೂಡ ಹೇರಲ್ಪಟ್ಟಿತು. ಇದರಿಂದ ಜಿಮ್ಗೆ ಹೋಗಲು ಸಮಸ್ಯೆ ಎದುರುಸಿದ ರಿಯಾ ನಿಹಾಲ್ ಸಿಂಗ್ ಅದೇ ಸಮಸ್ಯೆಗೆ ಪರಿಹಾರ ಹುಡುಕುವ ಒಂದು ಕಲ್ಪನೆ ಅವಳನ್ನು ಉದ್ಯಮಿನ್ನಾಗಿ ಮಾಡಿದೆ.
ಮನೆಯಲ್ಲೇ ಯಾಕೆ ಜಿಮ್ ತಯಾರಿಸಬಾರದು?:ಮದುವೆಯಾಗಿ 3 ತಿಂಗಳ ನಂತರ ಲಾಕ್‌ಡೌನ್ ಆದ ಕಾರಣ ತಮ್ಮ ಫಿಟ್ನೆಸ್ಗಾಗಿ ಜಿಮ್ಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದೇ ರೀತಿ ಸಮಸ್ಯೆ ತಮ್ಮಂತೆ ಉಳಿದವರು ಎದುರಿಸುತ್ತಿರಬಹುದು. ಹಾಗಾಗಿ ನಾವು ಯಾಕೆ ಮನೆಯಲ್ಲೇ ಜಿಮ್ ಸ್ಥಾಪಿಸಬಾರದೆಂದು ಈ ಉದ್ಯಮಕ್ಕೆ ದಂಪತಿಗಳು ಹೊರಡುತ್ತಾರೆ.
ಮೊದಲು ಜಿಮ್ ಉಪಕರಣ ಹುಡುಕುತ್ತಾರೆ ಆಗ ಭಾರತದಲ್ಲಿ ಹೊರ ದೇಶಗಳಂತೆ ಸ್ಮಾರ್ಟ್ ಎಕ್ಸರ್ ಸೈಜ್ ಉಪಕರಣಗಳು ಸಿಗುವುದಿಲ್ಲ ಎಂದು ಮನಗೊಳ್ಳುತ್ತಾರೆ. ಹೀಗಾಗಿ ನಾವೇ ಜಿಮ್ ಉಪಕರಣಗಳನ್ನು ನೀಡಬೇಕೆಂದು ನಿರ್ಧರಿಸುತ್ತಾರೆ. ಇದಕ್ಕಾಗಿ ಉಪಕರಣಗಳ ಲಭ್ಯತೆ, ತಯಾರಿಕೆ, ಇಲ್ಲಿಗೆ ತರುವುದಕ್ಕಾಗಿ ವಿವಿಧ ಯೋಜನೆಗಳ ಜೊತೆ ವಿವಿಧ ದೇಶಗಳ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ.
ಇದಾಗಿ, ಅವರು ಮೇ 2021 ರಲ್ಲಿ 'ಫ್ಲೆಕ್ಸ್‌ನೆಟ್' ಅನ್ನು ಪ್ರಾರಂಭಿಸುತ್ತಾರೆ. ಇದು ಗುರ್ಗಾಂವ್‌ನಲ್ಲಿ ಐದು ಜನರೊಂದಿಗೆ ಪ್ರಾರಂಭವಾಗುತ್ತದೆ. ಮೊದಲಿಗೆ ಎಲ್ಲ ಉತ್ಪನ್ನಗಳನ್ನು ಒಂದೇ ಬಾರಿಗೆ ಸೇರಿಸಿ ವ್ಯಾಪಾರ ಮಾಡುವ ಬದಲು, ಪ್ರತಿಯೊಂದನ್ನು ಪರಿಚಯಿಸುವುದು ಉತ್ತಮ ಎಂದು ಯೋಚಿಸಿ ಅದರಂತೆ ವ್ಯವಹಾರ ನಡೆಸುತ್ತಾರೆ.