ಕರ್ನಾಟಕ

karnataka

ಒಣ ಮೀನು ಕೂಡ ಜೀವಂತವಾಗಿ ಬರಬಹುದು..ಆದರೆ ಶಶಿಕಲಾ ಅವರು ಪಕ್ಷಕ್ಕೆ ಮರಳಲು ಸಾಧ್ಯವಿಲ್ಲ: ಎಐಡಿಎಂಕೆ

ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಎಐಡಿಎಂಕೆ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಆಡಿಯೋ ಸಂಭಾಷಣೆ ಬಿಡುಗಡೆಯಾಗಿದೆ. ಪಕ್ಷವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶವನ್ನು ಅವರು ಆಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಮರಳಲು ಶಶಿಕಲಾ ತಯಾರಿಯಲ್ಲಿದ್ದಾರೆ.

By

Published : Jun 16, 2021, 10:20 PM IST

Published : Jun 16, 2021, 10:20 PM IST

shashikala
shashikala

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಮರಳುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಪಕ್ಷದ ಉಚ್ಚಾಟಿತ ಮುಖಂಡರ ಜೊತೆ ಶಶಿಕಲಾ ಅವರು ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಐಎಡಿಎಂಕೆಯ 17 ಮುಖಂಡರು ಉಚ್ಚಾಟಣೆಗೊಂಡ ನಂತರ ಹೊರ ಬಿದ್ದಿರುವ ದೂರವಾಣಿ ಸಂಭಾಷಣೆಯಲ್ಲಿ, ಪಕ್ಷದ ಈಗಿನ ಸ್ಥಿತಿಗತಿ ಬಗ್ಗೆ ಶಶಿಕಲಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ಅವರ ಕನಸು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. 100 ವರ್ಷ ತುಂಬಿದರೂ ಎಐಎಡಿಎಂಕೆ ಬಲವಾಗಿರಬೇಕು. ಆ ಕಾರಣ, ನೀವು ನನ್ನೊಂದಿಗಿರಬೇಕು ಪಕ್ಷವು ದಾರಿ ತಪ್ಪುತ್ತಿದೆ ಮುಂದೆ ಹಾಗಾಗಬಾರದು ಎಂದು ಶಶಿಕಲಾ ಅವರು ಉಚ್ಛಾಟಿತ ನಾಯಕರಿಗೆ ತಿಳಿಸಿದ್ದಾರೆ.

ಆದರೆ,ಈ ಬಗ್ಗೆ ಆಕ್ರೋಶ ಹೊರಹಾಕಿರುವ ಪಕ್ಷದ ಮುಖಂಡರು ಶಶಿಕಲಾ ಅವರಿಗೆ ಮತ್ತು ಎಲ್ಲರಿಗೂ ಬಾಗಿಲು ಮುಚ್ಚಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮಾಜಿ ಸಚಿವ ಸಿ.ವಿ.ಷಣ್ಮುಖಂ, "ಒಣ ಮೀನು ಕೂಡ ಜೀವಂತವಾಗಿ ಬರಬಹುದು, ಆದರೆ, ಶಶಿಕಲಾ ಅವರು ಪಕ್ಷಕ್ಕೆ ಮರಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ABOUT THE AUTHOR

...view details