ಗುಜರಾತ್: ಉನಾದ ನವಾ ಬಂದರ್ ಮತ್ತು ಸಿಮರ್ ಸಮುದ್ರದಲ್ಲಿ ಮೀನುಗಾರಿಕಾ ದೋಣಿಗಳು ಮುಳುಗಿ 10 ರಿಂದ 15 ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಲವಾದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿದ 10 ರಿಂದ 15 ಮೀನುಗಾರಿಕಾ ದೋಣಿಗಳು ಗಿರ್ ಸೋಮನಾಥ ಬಳಿಯಿರುವ ಉನಾ ಸಮುದ್ರದಲ್ಲಿ ಮುಳುಗಿವೆ ಎಂದು ವರದಿಯಾಗಿದೆ. ಇದರ ಜತೆಗೆ, 12 ಮಂದಿ ಮೀನುಗಾರರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೂಲಗಳ ಪ್ರಕಾರ ನಾಲ್ವರು ಮೀನುಗಾರರು ದಡಕ್ಕೆ ಮರಳಿದ್ದಾರೆ ಎನ್ನಲಾಗಿದೆ.