ತೆಲಂಗಾಣ :ಕಾಳೇಶ್ವರಂ ನದಿಯಲ್ಲಿ ಮೀನುಗಾರಿಕೆಗಾಗಿ ಹೋದ ಮೀನುಗಾರನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಮೀನುಗಾರಿಕೆ ವೇಳೆ ತೇಲಿ ಹೋದ ಮೀನುಗಾರ : ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.. - ಮೀನುಗಾರಿಕೆ ವೇಳೆ ತೇಲಿ ಹೋದ ಮೀನುಗಾರ
ನೀರಿನ ಹರಿವು ಹೆಚ್ಚಿರುವ ಹಿನ್ನೆಲೆ ಆತ ನೀರಿನಲ್ಲೇ ಕೊಚ್ಚಿ ಹೋಗಿದ್ದಾನೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ..
ತೇಲಿ ಹೋದ ಮೀನುಗಾರ
ಕಾಳೇಶ್ವರಂ ನದಿ ನೀರನ್ನು ಮಲ್ಲಣ್ಣ ಸಾಗರದಿಂದ ನಿಜಾಮ್ ಸಾಗರಕ್ಕೆ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ ಹಿನ್ನೆಲೆ ಮೀನುಗಾರಿಕೆಗೆ ತೆರಳಿದ್ದ ಮೇದಕ್ ಜಿಲ್ಲೆಯ ರಾವಲಿ ಗ್ರಾಮದ ಮೂರು ಜನ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿ ಒಬ್ಬ ಮೀನುಗಾರ ಕೊಚ್ಚಿ ಹೋಗಿದ್ದಾನೆ.
ಮೀನುಗಾರಿಕೆ ಮಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ ಮೀನುಗಾರನನ್ನು ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನೀರಿನ ಹರಿವು ಹೆಚ್ಚಿರುವ ಹಿನ್ನೆಲೆ ಆತ ನೀರಿನಲ್ಲೇ ಕೊಚ್ಚಿ ಹೋಗಿದ್ದಾನೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.