ಬನಸ್ಕಾಂತ್:ಗುಜರಾತ್‌ನಲ್ಲಿ ನಿನ್ನೆಯಿಂದ ಮಳೆ ಶುರುವಾಗಿದೆ. ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಜೊತೆಗೆ ಅಚ್ಚರಿಯನ್ನೂ ಉಂಟು ಮಾಡಿದ್ದಾನೆ. ಕಾರಣ ಮಳೆಯಲ್ಲಿ ನೀರಿನ ಜೊತೆಗೆ ಮೀನುಗಳು ಭುವಿ ತಾಕಿವೆ!.
ಗುಜರಾತ್ನ ಬನಸ್ಕಾಂತ್ ಜಿಲ್ಲೆಯ ಖೇತ್ವಾ ಗ್ರಾಮದಲ್ಲಿ ಅಚ್ಚರಿಯ ವಿದ್ಯಮಾನ ಜರುಗಿದೆ. ಮುಂಗಾರು ಹಂಗಾಮಿನ ಮೊದಲ ಮಳೆಯಲ್ಲಿ ಮೀನುಗಳು ಬಿದ್ದಿವೆ. ರಾಗಿ ಕೊಯ್ಲು ಮಾಡಲು ಜಮೀನಿಗೆ ಬಂದ ರೈತರು ರಾಗಿ ಬೆಳೆ ಮಧ್ಯೆ ಮೀನುಗಳನ್ನು ಕಂಡು ಆಶ್ಚರ್ಯಚಕಿತರಾದರು. ಹೀಗೆ ಬಿದ್ದ ಮೀನುಗಳು ಪ್ರಾಣ ಬಿಟ್ಟಿವೆ. ಈ ಅಚ್ಚರಿಯ ವಿದ್ಯಮಾನದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.