ನವದೆಹಲಿ:ದೇಶದಲ್ಲಿ ಹಣಕಾಸಿನ ಸಂಪನ್ಮೂಲಗಳ ಸಮತೋಲನಗೊಳಿಸಬೆಕಾಗಿದ್ದು, ಇದರಿಂದ ಆರ್ಥಿಕತೆಯಲ್ಲಿ ಕೆಲವೊಂದು ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ತಿಳಿಸಿದ್ದಾರೆ.
ದೇಶದಲ್ಲಿ ಹಣಕಾಸಿನ ಸಂಪನ್ಮೂಲ ಸಮತೋಲನ ಅಗತ್ಯ: ತುಹಿನ್ ಕಾಂತ ಪಾಂಡೆ - ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ
ಹಣಕಾಸು ಸಂಪನ್ಮೂಲಗಳು ಮತ್ತು ಸುಧಾರಣೆಗಳನ್ನು ಸಮತೋಲನಗೊಳಿಸಬೇಕಾಗಿದೆ ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಎಫ್‌ಐಸಿಸಿಐ 18 ನೇ ವಾರ್ಷಿಕ ಬಂಡವಾಳ ಮಾರುಕಟ್ಟೆಗಳ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದಲ್ಲಿನ ಕ್ಯಾಪಿಟಲ್ ಮಾರ್ಕೆಟ್ ಬೆಳವಣಿಗೆ ಚುರುಕುಗೊಳಿಸುವುದು ದೊಡ್ಡ ಜವಾಬ್ದಾರಿಯಾಗಿದ್ದು, ನಾವು ಹಣಕಾಸಿನ ಸಂಪನ್ಮೂಲಗಳನ್ನು ಸಮತೋಲನಗೊಳಿಸುವ ಮೂಲಕ ಆರ್ಥಿಕತೆಯಲ್ಲಿ ಸುಧಾರತೆ ತರಲು ಸಾಧ್ಯವಾಗುತ್ತದೆ ಎಂದರು. ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡುವುದರಿಂದ ಖಾಸಗಿ ವಲಯದ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.
ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ನಿಂಧಾಗಿ ಮಾತ್ರ ಉತ್ತಮವಾದ ಮಾರುಕಟ್ಟೆ ರಚನೆ ಮಾಡಲು ಸಾಧ್ಯ ಎಂದಿರುವ ಪಾಂಡೆ, ಕೋವಿಡ್ ಮಹಾಮಾರಿಯಿಂದ ನಾವು ಅನೇಕ ರೀತಿಯ ತೊಂದರೆ ಅನುಭವಿಸಿದ್ದೇವೆ. ಆದರೆ ಹೂಡಿಕೆ ಮಾಡುವ ಯೋಜನೆ ಮುಂದುವರೆಯಬೇಕಾಗಿದ್ದು, ಅದಕ್ಕೋಸ್ಕರ ಬಜೆಟ್ನಲ್ಲಿ ಹಣಕಾಸು ಸಚಿವರು ಅನೇಕ ಯೋಜನೆ ಹೆಸರಿಸಿದ್ದಾರೆ ಎಂದರು. ಸಾರ್ವಜನಿಕ ಉದ್ಯಮಗಳಿಗೆ ಕನಿಷ್ಠ ಪಾಲು ಉಳಿಸಿಕೊಳ್ಳಬೇಕಾಗಿದ್ದು, ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವೆ ಇದರಲ್ಲಿ ಸೇರಿಕೊಂಡಿವೆ ಎಂಬ ಮಾಹಿತಿ ನೀಡಿದರು.