ಕರ್ನಾಟಕ

karnataka

ETV Bharat / bharat

ತಮಿಳುನಾಡು ದೇವಸ್ಥಾನದಲ್ಲಿ ಒಡುವರ್​ ಆಗಿ ಮೊದಲ ಬಾರಿಗೆ ಮಹಿಳೆ ನೇಮಕ - MK Stalin has completed 100 days as the CM

ಬ್ರಾಹ್ಮಣೇತರ ಪುರೋಹಿತರಾಗಿ ಆದೇಶ ಪ್ರತಿ ಪಡೆದವರನ್ನು ಮೈಲಾಪುರ, ಕಪಾಲೀಶ್ವರರ್ ದೇವಸ್ಥಾನ, ಮಾದಂಬಕ್ಕಂ ಧೇನುಪುರೀಶ್ವರ ದೇವಸ್ಥಾನ ಮತ್ತು ತಿರುಚ್ಚಿ ಸಮಯಪುರಂ ಮರಿಯಮ್ಮನ್ ದೇವಸ್ಥಾನಗಳಲ್ಲಿ ನೇಮಿಸಲಾಗಿದೆ.

first woman odhuvar in temple
ತ. ನಾಡು ದೇವಸ್ಥಾನದಲ್ಲಿ ಒಡುವರ್​ ಆಗಿ ಮೊದಲ ಮಹಿಳೆ ನೇಮಕ

By

Published : Aug 16, 2021, 4:11 PM IST

Updated : Aug 16, 2021, 4:35 PM IST

ತಿರುಚ್ಚಿ(ತಮಿಳುನಾಡು): ರಾಜ್ಯದ ಮೊದಲ ಮಹಿಳಾ ಒಡುವರ್​ ವಿಡಿಯೋ ವೈರಲ್ ಆಗಿದೆ. ಎಲ್ಲಾ ಜಾತಿಗಳ ಪುರೋಹಿತರನ್ನು ಸಿಎಂ ಸ್ಟಾಲಿನ್ ಅವರು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಡಿಯಲ್ಲಿ ನೇಮಕ ಮಾಡಿದ್ದಾರೆ.

ಎಂ ಕೆ ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿದ್ದಾರೆ. 100 ನೇ ದಿನವಾದ (ಆಗಸ್ಟ್ 14) ಅವರು ತರಬೇತಿಯನ್ನು ಪೂರ್ಣಗೊಳಿಸಿದ ಬ್ರಾಹ್ಮಣೇತರ ಪುರೋಹಿತರಿಗೆ ನೇಮಕಾತಿ ಆದೇಶಗಳನ್ನು ನೀಡಿದ್ದಾರೆ. ಅದರ ಪ್ರಕಾರ 29 ಮಂದಿ ಒತ್ತುವರ್‌ಗಳು ಸೇರಿದಂತೆ 58 ಮಂದಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಗಿದೆ.

ತಮಿಳುನಾಡು ದೇವಸ್ಥಾನದಲ್ಲಿ ಒಡುವರ್​ ಆಗಿ ಮೊದಲ ಬಾರಿಗೆ ಮಹಿಳೆ ನೇಮಕ

ನೇಮಕಾತಿ ಆದೇಶ ಪಡೆದವರನ್ನು ಮೈಲಾಪುರ, ಕಪಾಲೀಶ್ವರರ್ ದೇವಸ್ಥಾನ, ಮಾದಂಬಕ್ಕಂ ಧೇನುಪುರೀಶ್ವರ ದೇವಸ್ಥಾನ ಮತ್ತು ತಿರುಚ್ಚಿ ಸಮಯಪುರಂ ಮರಿಯಮ್ಮನ್ ದೇವಸ್ಥಾನಗಳಲ್ಲಿ ನೇಮಿಸಲಾಗಿದೆ.

ಬ್ರಾಹ್ಮಣೇತರ ಪುರೋಹಿತರಾಗಿ ಆದೇಶ ಪ್ರತಿ ಹಂಚಿಕೆ

ಚೆಂಗಲ್ಪಟ್ಟು ಜಿಲ್ಲೆ ತಾಂಬರಂ ಸಮೀಪದ ಸೆಲಯೂರಿನ ಸುಹಂಜನಾ (27) ನಿನ್ನೆಯಿಂದ ಮಾದಂಬಕ್ಕಂನಲ್ಲಿ ಮೊದಲ ಮಹಿಳಾ ಒಡುವರ್​ (ಪಠಣಕಾರ) ಆಗಿ ನೇಮಕಗೊಂಡಿದ್ದಾರೆ. ಸುಹಂಜನಾ ತನ್ನ 10 ನೇ ತರಗತಿ ಪೂರ್ಣಗೊಳಿಸಿದ ನಂತರ, ದೇವರಮ್ (ತಮಿಳು ಭಕ್ತಿಗೀತೆ) ಹಾಡಲು ಆಸಕ್ತಿ ಹೊಂದಿದ್ದರು. ಈಗ ದೇವಾಲಯದ ಮುಂದೆ ಮೊದಲ ಮಹಿಳಾ ಪಠಣಕಾರ್ತಿಯಾಗಿ ನೇಮಕಗೊಂಡಿದ್ದಾರೆ.

Last Updated : Aug 16, 2021, 4:35 PM IST

ABOUT THE AUTHOR

...view details