ನವದೆಹಲಿ:ಆದಿತ್ಯ-ಎಲ್1 ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್, ಮುಂದಿನ ಅಕ್ಟೋಬರ್‌ನಲ್ಲಿ 'ಗಗನಯಾನ' ಯೋಜನೆಯ ಮೊದಲ ಪ್ರಯೋಗ ನಡೆಯಲಿದೆ ಎಂದು ಹೇಳಿದ್ದಾರೆ.
ಆದಿತ್ಯ-ಎಲ್ 1 ಉಡಾವಣೆಯನ್ನು ಭಾರತ 'ಪ್ರಜ್ವಲಿಸುವ ಕ್ಷಣ' ಎಂದು ಕರೆದ ಜಿತೇಂದ್ರ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಹರಿಕೋಟಾದಲ್ಲಿ ಅವಕಾಶದ ದ್ವಾರಗಳನ್ನು ತೆರೆದಿದ್ದರಿಂದ ಇದು ಸಾಧ್ಯವಾಗಿದೆ ಎಂದರು. ಇದು ಭಾರತಕ್ಕೆ ಅಮೂಲ್ಯ ಘಳಿಗೆ. ಚಂದ್ರಯಾನದಂತೆ ಇಲ್ಲಿಯೂ ಇಡೀ ರಾಷ್ಟ್ರವೇ ತೊಡಗಿಸಿಕೊಂಡಿದೆ ಎಂದರು.
ಇದನ್ನೂ ಓದಿ:ಚಂದ್ರಯಾನ-3, ಆದಿತ್ಯ-ಎಲ್1 ಯಶಸ್ಸಿನ ಬಳಿಕ ಇಸ್ರೋದ ಮುಂದಿನ ಯೋಜನೆ ಏನು?: ಇಲ್ಲಿದೆ ಮಾಹಿತಿ
ಆದಿತ್ಯ-ಎಲ್1 ಬಗ್ಗೆ ಒಂದಿಷ್ಟು..:ಆದಿತ್ಯ-ಎಲ್1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ವೀಕ್ಷಣಾಲಯ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡು ಹಿಡಿಯಲಿದೆ. ನೌಕೆಯು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸಲಿದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಯೋಗಗಳಿಗೆ ಒಳಗಾಗುತ್ತದೆ. ನಂತರ ಆದಿತ್ಯ-ಎಲ್1 ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಕುಶಲತೆಗೆ ಒಳಗಾಗುತ್ತದೆ. ಅದು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಎಲ್1 ಪಾಯಿಂಟ್ ತಲುಪಲು ಉಪಗ್ರಹ ಸುಮಾರು 15 ಮಿಲಿಯನ್ ಕಿ.ಮೀ ಪ್ರಯಾಣಿಸಲಿದೆ.