ಕೋಲ್ಕತ್ತಾ:ಇಂದು ಎಲ್ಲೆಡೆ ನೂತನ ವರ್ಷದ ಸಂಭ್ರಮ. ದೇಶದ ವಿವಿಧೆಡೆಗಳಲ್ಲಿ 2022ರ ಹೊಸ ವರ್ಷದ ಮೊದಲ ಸೂರ್ಯೋದಯದ ದೈವಿಕ ನೋಟವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.
ಪಶ್ಚಿಮ ಬಂಗಾಳದ ಹೌರಾದಲ್ಲಿ 2022ರ ಹೊಸ ವರ್ಷದ ಮೊದಲ ಸೂರ್ಯೋದಯವನ್ನು ಜನರು ಆನಂದಿಸಿದರು. ಹೊಸ ವರ್ಷ, ಹೊಸ ದಿನದ ಈ ಸುಂದರವಾದ ದೃಶ್ಯಾವಳಿ ಜನತೆಯನ್ನು ಬೆರಗುಗೊಳಿಸಿತು.
ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಬಳಿಯಿಂದಲೂ ಕೂಡ ಹೊಸವರ್ಷದ ಮೊದಲ ದಿನ ಬಾನಂಗಳದಲ್ಲಿ ರವಿ ಮೂಡಿ ಬರುತ್ತಿರುವ ದೃಶ್ಯವನ್ನು ಜನರು ನೋಡಿ ಖುಷಿಪಟ್ಟರು. ಹಾಗೆಯೇ ಅಸ್ಸೋಂನ ಗುವಾಹಟಿ ಬಳಿಯೂ ಕೂಡ ಸೂರ್ಯೋದಯವು ಗಮನ ಸೆಳೆಯಿತು.
ಒಡಿಶಾದ ಪುರಿ ಕಡಲ ತೀರದಲ್ಲೂ ಕೂಡ ಸೂರ್ಯನುದಯದ ಕ್ಷಣವನ್ನು ಜನತೆ ಸಂಭ್ರಮಿಸಿದರು. ಅಲ್ಲದೆ, ಪುರಿ ಜಗನ್ನಾಥ ದೇವಾಲಯದೆದುರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ವರ್ಷಾರಂಭದ ದಿನದಂದು ಸಕಲ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಪುರಿಯಲ್ಲಿ ಸೂರ್ಯೋದಯದ ಸಂಭ್ರಮ
ಇದನ್ನೂ ಓದಿ:ಮಗುವಿಗೆ ಪುನೀತ್ ರಾಜಕುಮಾರ್ ಹೆಸರಿಟ್ಟ ಕಲಬುರಗಿ ದಂಪತಿ