ಕರ್ನಾಟಕ

karnataka

ETV Bharat / bharat

ಸ್ಕಾಟ್ಲೆಂಡ್ ಸಂಸದರಾದ ಮೊದಲ ಭಾರತೀಯರಿವರು.. - Pam Gosal MSP

ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಇಬ್ಬರು ಸ್ಕಾಟ್ಲೆಂಡ್ ಸಂಸತ್ತಿಗೆ ಆಯ್ಕೆಯಾಗಿದ್ದು, ಹೆಮ್ಮೆ-ಸಂತಸ ವ್ಯಕ್ತಪಡಿಸಿದ್ದಾರೆ.

first Scotland MPs of Indian origin
ಸ್ಕಾಟ್ಲೆಂಡ್ ಸಂಸದರಾದ ಮೊದಲ ಭಾರತೀಯರಿವರು

By

Published : May 17, 2021, 7:01 AM IST

ನವದೆಹಲಿ:ಸ್ಕಾಟ್ಲೆಂಡ್ ಸಂಸದರಾದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾಮ್​ ಗೋಸಲ್​ ಹಾಗೂ ಡಾ.ಸಂದೇಶ್ ಪ್ರಕಾಶ್ ಗುಲ್ಹಾನೆ ಪಾತ್ರರಾಗಿದ್ದಾರೆ.

ಪಾಮ್​ ಗೋಸಲ್​, ಇವರು ಸ್ಕಾಟ್ಲೆಂಡ್​​ನ ಭಾರತೀಯ ಮೂಲದ ಮೊದಲ 'ಮಹಿಳಾ ಹಾಗೂ ಸಿಖ್'​ ಸಂಸದೆಯಾಗಿದ್ದಾರೆ. ಅಲ್ಲದೇ ಸ್ಕಾಟ್ಲೆಂಡ್ ಸಂಸತ್ತಿಗೆ ಆಯ್ಕೆಯಾದ ಇಬ್ಬರೇ ಮಹಿಳಾ ಸಂಸದರು - ಪಾಕಿಸ್ತಾನ ಮೂಲದ ಕೌಕಾಬ್ ಸ್ಟೀವರ್ಟ್ ಹಾಗೂ ಪಾಮ್​ ಗೋಸಲ್ ಆಗಿದ್ದಾರೆ.

ಡಾ.ಸಂದೇಶ್ ಪ್ರಕಾಶ್, ಇವರು ಸ್ಕಾಟ್ಲೆಂಡ್ ಸಂಸದನಾದ ಭಾರತೀಯ ಮೂಲದ ಮೊದಲ ಪುರುಷ ಹಾಗೂ ವೈದ್ಯರಾಗಿದ್ದಾರೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಸಂದೇಶ್​​ರ ಪೋಷಕರು ವಾಸಿಸುತ್ತಿದ್ದಾರೆ. ಕೋವಿಡ್​ ಸಾಂಕ್ರಾಮಿಕದ ಸಮಯದಲ್ಲಿ ಸಂದೇಶ್ ವೈದ್ಯನಾಗಿ ಸ್ಕಾಟ್ಲೆಂಡ್​ನಲ್ಲಿ ರೋಗಿಗಳ ಸೇವೆ ಸಲ್ಲಿಸಿದ್ದರು.

ಗೋಸಲ್ ಹಾಗೂ ಗುಲ್ಹಾನೆ ಇಬ್ಬರೂ ತಮ್ಮ ಟ್ವಿಟರ್​ ಖಾತೆಯಲ್ಲಿ ತಾವು ಸಂಸದರಾದ ಸುದ್ದಿಯನ್ನು ಹಂಚಿಕೊಡು, ಹೆಮ್ಮೆ-ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details