ಕರ್ನಾಟಕ

karnataka

ETV Bharat / bharat

ಪಂಚರಾಜ್ಯ ಫೈಟ್​​ : ಬಂಗಾಳ, ಅಸ್ಸೋಂನಲ್ಲಿ ಮೊದಲ ಹಂತದ ಮತದಾನ ಆರಂಭ - ಪಂಚರಾಜ್ಯ ಫೈಟ್​​

ಎರಡು ರಾಜ್ಯಗಳಿಂದ 1.54 ಕೋಟಿ ಜನರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದು, ಇದಕ್ಕಾಗಿ ಕೇಂದ್ರ ಚುನಾವಣಾ ಆಯೋಗದಿಂದ ಎಲ್ಲ ಸಿದ್ಧತೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದ್ದು, ಕೋವಿಡ್ ಮಾರ್ಗಸೂಚಿ ಅನುಸರಣೆ ಕಡ್ಡಾಯವಾಗಿದೆ.

ಬಂಗಾಳ, ಅಸ್ಸೋಂನಲ್ಲಿ ಮೊದಲ ಹಂತದ ಮತದಾನ ಆರಂಭ
ಬಂಗಾಳ, ಅಸ್ಸೋಂನಲ್ಲಿ ಮೊದಲ ಹಂತದ ಮತದಾನ ಆರಂಭ

By

Published : Mar 27, 2021, 7:19 AM IST

ಕೋಲ್ಕತ್ತಾ/ಗುವಾಹಟಿ:ಪಂಚರಾಜ್ಯ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಬಂಗಾಳದ 30 ಕ್ಷೇತ್ರ ಹಾಗೂ ಅಸ್ಸೋಂನ 47 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ಆರಂಭಗೊಂಡಿದೆ.

ಎರಡು ರಾಜ್ಯಗಳಿಂದ 1.54 ಕೋಟಿ ಜನರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದು, ಇದಕ್ಕಾಗಿ ಕೇಂದ್ರ ಚುನಾವಣಾ ಆಯೋಗದಿಂದ ಎಲ್ಲ ಸಿದ್ಧತೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದ್ದು, ಕೋವಿಡ್ ಮಾರ್ಗಸೂಚಿ ಅನುಸರಣೆ ಕಡ್ಡಾಯವಾಗಿದೆ.

ಪಶ್ಚಿಮ ಬಂಗಾಳದ 30 ಕ್ಷೇತ್ರಗಳಲ್ಲಿ 91 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, 73 ಲಕ್ಷ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಅಸ್ಸೋಂನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿರುವ 47 ಕ್ಷೇತ್ರದಿಂದ 23 ಮಹಿಳೆಯರು ಸೇರಿ 264 ಅಭ್ಯರ್ಥಿಗಳ ಭವಿಷ್ಯವನ್ನು 81 ಲಕ್ಷ ಜನರು ಬರೆಯಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಅಸ್ಸೋಂನ 126 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನವಾಗಲಿದೆ.

ಓದಿ : ಪಂಚರಾಜ್ಯ ಫೈಟ್​​: ಬಂಗಾಳ, ಅಸ್ಸೋಂನಲ್ಲಿ ಮೊದಲ ಹಂತದ ಮತದಾನ

ABOUT THE AUTHOR

...view details