ಕರ್ನಾಟಕ

karnataka

ETV Bharat / bharat

ಶ್ರೀನಗರದಲ್ಲಿ ರಾತ್ರಿ ವೇಳೆಯ ಮೊದಲ ವಿಮಾನ ಹಾರಾಟ ಯಶಸ್ವಿ - ಶೇಖ್ ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಮಹತ್ವದ ಬೆಳವಣಿಗೆಯೊಂದರಲ್ಲಿ ಶ್ರೀನಗರದ ಶೇಖ್ ಆಲಂ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ನಿಂದ ಗೋಏರ್ ನಡೆಸಿದ ರಾತ್ರಿ ವೇಳೆಯ ಮೊದಲ ವಿಮಾನ ಹಾರಾಟ ಯಶಸ್ವಿಯಾಗಿದೆ.

First night flight takes off from Srinagar airport
ಮೊದಲ ವಿಮಾನ ಹಾರಾಟ ಯಶಸ್ವಿ

By

Published : Mar 20, 2021, 9:16 AM IST

ಶ್ರೀನಗರ: ಶ್ರೀನಗರದ ಶೇಖ್ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಏರ್ ರಾತ್ರಿ ವಿಮಾನಯಾನ ಹಾರಾಟ ಯಶಸ್ವಿಯಾಗಿದ್ದು, ಶ್ರೀನಗರದ ಏರ್​ಪೋರ್ಟ್​​ನಿಂದ ದೆಹಲಿಗೆ ಶುಕ್ರವಾರ ರಾತ್ರಿ ವೇಳೆಯ ಮೊದಲ ವಿಮಾನ ಹಾರಾಟ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಿಂದ ರಾತ್ರಿ ಸಮಯದ ಮೊದಲ ವಿಮಾನವನ್ನು GoAir ನಿರ್ವಹಿಸುತ್ತಿದ್ದು, ವಿಮಾನ ನಿಲ್ದಾಣದಿಂದ ರಾತ್ರಿ 7.15 ಕ್ಕೆ ರಾಜಧಾನಿ ನವದೆಹಲಿಗೆ ವಿಮಾನ ಹೊರಟಿತು. ಈ ಸಂದರ್ಭದಲ್ಲಿ ಹಾಜರಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಪ್ರಧಾನ ಕಾರ್ಯದರ್ಶಿ ರಂಜನ್ ಪ್ರಕಾಶ್ ಠಾಕೂರ್ ಅವರು ವಿಮಾನದ ಸಿಬ್ಬಂದಿಗೆ ಶುಭ ಕೋರಿದರು.

ಶುಕ್ರವಾರ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿ ರಾತ್ರಿ ಹಾರಾಟ ಕಾರ್ಯಾಚರಣೆಯನ್ನು ನಡೆಸಿದ್ದು, ನಿರ್ದೇಶನಾಲಯದ ಅಂತಿಮ ಅನುಮೋದನೆಯ ನಂತರ ವಿಮಾನ ನಿಲ್ದಾಣದಿಂದ ವಿಮಾನ ರಾತ್ರಿ ಪೂರ್ಣ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details