ಕರ್ನಾಟಕ

karnataka

ETV Bharat / bharat

'ಭಾರತಕ್ಕೆ ಬೆಂಬಲ': ತುರ್ತು ಆರೋಗ್ಯ ಸಾಮಗ್ರಿ ಹೊತ್ತು ಭಾರತಕ್ಕೆ ಬಂದಿಳಿದ ಅಮೆರಿಕ ವಿಮಾನ

ಸುಮಾರು 400 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳು, ಒಂದು ಮಿಲಿಯನ್ ಕ್ಷಿಪ್ರ ಕೊರೊನಾ ಪರೀಕ್ಷಾ ಕಿಟ್‌ಗಳು ಮತ್ತು ಇತರ ಆಸ್ಪತ್ರೆ ಉಪಕರಣಗಳೊಂದಿಗೆ ಯುಎಸ್​ನ ಸೂಪರ್ ಗ್ಯಾಲಕ್ಸಿ ಮಿಲಿಟರಿ ಟ್ರಾನ್ಸ್‌ಪೋರ್ಟರ್ ಇಂದು ಬೆಳಿಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

Covid Relief Supplies
ಯುಎಸ್​ನ ಸೂಪರ್ ಗ್ಯಾಲಕ್ಸಿ ಮಿಲಿಟರಿ ಟ್ರಾನ್ಸ್‌ಪೋರ್ಟರ್

By

Published : Apr 30, 2021, 9:52 AM IST

ನವದೆಹಲಿ: ದೇಶದ ಆರೋಗ್ಯ ವ್ಯವಸ್ಥೆಯನ್ನು ಕೊರೊನಾ ಬಲಹೀನಗೊಳಿಸುತ್ತಿರುವ ಸಂದರ್ಭದಲ್ಲಿ ಅನೇಕ ದೇಶಗಳು ಸಹಾಯಹಸ್ತ ಚಾಚಿವೆ. ಇಂದು ಬೆಳಗ್ಗೆ ಅಮೆರಿಕದಿಂದ ಮೊದಲ ಕೋವಿಡ್ ತುರ್ತು ಸಹಾಯ ಸಾಮಗ್ರಿ ಭಾರತಕ್ಕೆ ಆಗಮಿಸಿದೆ.

400 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳು, ಸುಮಾರು ಒಂದು ಮಿಲಿಯನ್ ಕ್ಷಿಪ್ರ ಕೊರೊನಾ ಪರೀಕ್ಷಾ ಕಿಟ್‌ಗಳು ಮತ್ತು ಇತರ ಆಸ್ಪತ್ರೆ ಉಪಕರಣಗಳೊಂದಿಗೆ ಸೂಪರ್ ಗ್ಯಾಲಕ್ಸಿ ಮಿಲಿಟರಿ ಟ್ರಾನ್ಸ್‌ಪೋರ್ಟರ್ ಇಂದು ಬೆಳಿಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಯುಎಸ್​ನಿಂದ ಆರೋಗ್ಯ ಸಾಮಾಗ್ರಿ ಆಗಮನ

ಯುಎಸ್ ರಾಯಭಾರ ಕಚೇರಿಯು ಈ ಬಗ್ಗೆ ಟ್ವೀಟ್​ ಮಾಡಿದ್ದು, ವೈದ್ಯಕೀಯ ಉಪಕರಣಗಳ ಸರಬರಾಜು ಮಾಡುವ ಚಿತ್ರಗಳನ್ನು ಹಂಚಿಕೊಂಡಿದೆ.

"ಯುನೈಟೆಡ್ ಸ್ಟೇಟ್ಸ್‌ನಿಂದ ಹಲವಾರು ತುರ್ತು ಕೋವಿಡ್​ ಪರಿಹಾರ ಸಾಮಾಗ್ರಿಗಳು ಭಾರತಕ್ಕೆ ಬಂದಿವೆ. 70 ವರ್ಷಗಳ ಸಹಕಾರವನ್ನು ಆಧರಿಸಿ, ಅಮೆರಿಕ ಭಾರತದೊಂದಿಗೆ ನಿಂತಿದೆ. ನಾವು ಕೊರೊನಾ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ. #USIndiaDosti" ಎಂದು ಬರೆದುಕೊಂಡಿದೆ.

ಕೆಲವು ದಿನಗಳ ಹಿಂದೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಿರಂತರ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದರು. "ಸಾಂಕ್ರಾಮಿಕ ರೋಗದ ಆರಂಭದಲ್ಲಿ ನಾವು ತೊಂದರೆಗೊಳಗಾಗಿದ್ದಾಗ ಭಾರತವು ನಮಗೆ ತುರ್ತು ಸಹಾಯ ಮಾಡಿದೆ. ಅದರಂತೆ ಭಾರತದ ಅಗತ್ಯ ಸಮಯದಲ್ಲಿ ನಾವು ಸಹಾಯ ಮಾಡಲು ನಿರ್ಧರಿಸಿದ್ದೇವೆ" ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬೈಡನ್ ಸೋಮವಾರದಂದು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು.

ABOUT THE AUTHOR

...view details