ಅಹಮದಾಬಾದ್ (ಗುಜರಾತ್):ದೇಶದಾದ್ಯಂತ ಒಮಿಕ್ರಾನ್ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದು, ಇಂದು ಗುಜರಾತ್ನಲ್ಲಿ ಮೊದಲ ಪ್ರಕರಣ ದೃಢಪಟ್ಟಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ರಾಜ್ಯದ ಮೊದಲ ಒಮಿಕ್ರಾನ್ ವೈರಸ್ ಪ್ರಕರಣ ಕಾಣಿಸಿಕೊಂಡಿದ್ದು, ಆತನನ್ನು ಜಾಮ್ನಗರದ ಜೆಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Omicron: ದೇಶದಲ್ಲಿ ಮೊತ್ತೊಂದು ಒಮಿಕ್ರಾನ್ ಕೇಸ್ ದೃಢ - ಕರ್ನಾಟಕ ಒಮಿಕ್ರಾನ್ ಪ್ರಕರಣಗಳು
ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಆತನನ್ನು ಜಾಮ್ನಗರದ ಜೆಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಾತ್ನಲ್ಲಿ ರಾಜ್ಯದ ಮೊದಲ ಒಮಿಕ್ರಾನ್ ವೈರಸ್ ದೃಢ
ಒಮಿಕ್ರಾನ್ ದೃಢಪಟ್ಟ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಆಗಮಿಸಿದವನಾಗಿದ್ದು, ಇವರು 90 ಮಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ದೃಢಪಟ್ಟ 2 ಪ್ರಕರಣ ಸೇರಿ ದೇಶದಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾದಂತಾಗಿದೆ.
ಇದನ್ನೂ ಓದಿ:ಒಮಿಕ್ರಾನ್ ಭೀತಿ ; ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಮುನ್ನವೇ ಸೋಂಕಿತ ವ್ಯಕ್ತಿ ಎಸ್ಕೇಪ್