ಕರ್ನಾಟಕ

karnataka

ETV Bharat / bharat

ಕಳಪೆ ಆಹಾರ ಪೂರೈಕೆ ವಿಚಾರ: ಕಾನ್ಸ್​ಟೇಬಲ್ ಪ್ರತಿಭಟನೆ ವಿಡಿಯೋ ವೈರಲ್​, ತನಿಖೆಗೆ ಆದೇಶಿಸಿದ ಇಲಾಖೆ​​ - ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಪೊಲೀಸ್​ ಪೇದೆ ಮನೋಜ್​ ಕುಮಾರ್​ ಅವರ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಆಹಾರದ ಗುಣಮಟ್ಟದ ಬಗ್ಗೆ ಅನಗತ್ಯವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ

firozabad-constable
ಕಳಪೆ ಆಹಾರ ಪೂರೈಕೆ ವಿಚಾರ

By

Published : Aug 11, 2022, 9:46 AM IST

ಫಿರೋಜಾಬಾದ್ (ಉತ್ತರ ಪ್ರದೇಶ):ಪೊಲೀಸ್ ಪೇದೆಯೊಬ್ಬರು ತಮಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?:ಪ್ರತಿಭಟನೆ ನಡೆಸುತ್ತಿದ್ದಾಗ ಅಳುತ್ತಿದ್ದ ಮನೋಜ್‌ಕುಮಾರ್ ಎಂಬ ಕಾನ್ಸ್​​ಟೇಬಲ್​​​​​​​​​​​​ ಅವರನ್ನು ಇತರ ಪೊಲೀಸ್​ ಸಿಬ್ಬಂದಿ ಹೊರಹಾಕಿದ್ದರು. ಇಲಾಖೆ ಕೊಡುತ್ತಿರುವ ಆಹಾರವು ಪ್ರಾಣಿ ಕೂಡ ತಿನ್ನಲು ಸಾಧ್ಯವಿಲ್ಲ, ಆದರೆ, ಅದನ್ನು ನಮಗೆ ನೀಡಲಾಗುತ್ತಿದೆ. ಇದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿಸಿಪಿಗಳ ಮಾಡುತ್ತಿರುವ ಹಗರಣವಾಗಿದೆ ಎಂದು ವಿಡಿಯೋದಲ್ಲಿ ಪೇದೆ ಆರೋಪಿಸಿದ್ದಾರೆ ಎನ್ನಲಾಗಿದೆ.

ಕಳಪೆ ಆಹಾರ ಪೂರೈಕೆ ವಿಚಾರ

ಅಷ್ಟೇ ಅಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ ಹೊರತಾಗಿಯೂ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸಲಾಗಿದೆ ಎಂದು ಪೊಲೀಸ್​ ಕಾನ್ಸ್​ಟೇಬಲ್​ ಆರೋಪಿಸಿದ್ದಾರೆ.

ಕಾನ್ಸ್​ಟೇಬಲ್​ ಆರೋಪ ತಳ್ಳಿ ಹಾಕಿದ ಹಿರಿಯ ಅಧಿಕಾರಿಗಳು:ಆದರೆ, ಪೊಲೀಸ್​ ಪೇದೆ ಮನೋಜ್​ ಕುಮಾರ್​ ಅವರ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಆಹಾರದ ಗುಣಮಟ್ಟದ ಬಗ್ಗೆ ಅನಗತ್ಯವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ವಿಡಿಯೋ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಕಾನ್ಸ್​ಟೇಬಲ್ ಪ್ರತಿಭಟನೆ ವಿಡಿಯೋ ವೈರಲ್​

ಕಠಿಣ ಕ್ರಮಕ್ಕೆ ಮುಂದಾಯಿತಾ ಇಲಾಖೆ?: ಆಹಾರ ಗುಣಮಟ್ಟವನ್ನು ಪ್ರಶ್ನಿಸಿದ ಪೊಲೀಸ್ ಕಾನ್ಸ್​ಟೇಬಲ್​ ಮನೋಜ್ ಕುಮಾರ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್​ ಇಲಾಖೆ ಸಿದ್ಧತೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಪೊಲೀಸ್‌ ಇಲಾಖೆ ಸಾಮಾಜಿಕ ಮಾಧ್ಯಮ ವಿಭಾಗ, ಆರೋಪಿತ ಕಾನ್ಸ್‌ಟೇಬಲ್ ಅವರನ್ನು ಜಗಳಗಂಟ ಎಂದು ವಿವರಿಸುವ ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ. ಈ ಕಾನ್ಸ್​ಟೇಬಲ್​ ಈ ಹಿಂದೆ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಹೇಳಿಕೊಂಡಿದೆ. ಕಾನ್ಸ್​ಟೇಬಲ್​ ನಡವಳಿಕೆಯ ತನಿಖೆಯನ್ನು ಸಿಒ ಲೈನ್‌ಗೆ ಮತ್ತು ಆಹಾರ ಪ್ರಕರಣದ ಗುಣಮಟ್ಟದ ತನಿಖೆಯನ್ನು ಸಿಒ ಸಿಟಿಗೆ ಹಸ್ತಾಂತರಿಸಲಾಗಿದೆ.

ಉತ್ತಮ ಆಹಾರ ನೀಡುವ ಬದಲು ಕ್ರಮ ಎಂದು ಆಕ್ರೋಶ:ಈ ನಡುವೆ ಅಧಿಕಾರಿಗಳ ವಿರುದ್ಧ ಕಾನ್ಸ್​ಟೇಬಲ್​ ಗರಂ ಆಗಿದ್ದಾರೆ. ಕಳಪೆ ಆಹಾರದ ಬಗ್ಗೆ ದೂರು ನೀಡಿದ್ದರೂ ಉತ್ತಮ ಆಹಾರ ನೀಡುವ ಬದಲು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾನ್ಸ್‌ಟೇಬಲ್‌ನ ಪ್ರತಿಭಟನೆಯಿಂದ ಪೊಲೀಸ್​ ಇಲಾಖೆ ಮುಖಭಂಗಕ್ಕೊಳಗಾಗಿದೆ. ಕಾನ್ಸ್​​ಟೇಬಲ್​ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನು ಓದಿ:ಸೇನಾ ಶಿಬಿರದ ಮೇಲೆ ದಾಳಿ: ಇಬ್ಬರು ಉಗ್ರರು ಖತಂ, ಮೂವರು ಯೋಧರು ಹುತಾತ್ಮ

ABOUT THE AUTHOR

...view details