ಕರ್ನಾಟಕ

karnataka

ETV Bharat / bharat

Live Video: ಪೊಲೀಸರು-ಮರಳು ಮಾಫಿಯಾ ಗ್ಯಾಂಗ್​ ನಡುವೆ ಗುಂಡಿನ ವಾರ್​ - ಮಧ್ಯಪ್ರದೇಶ ಮೊರೆನಾ

ಚಂಬಲ್​ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಮೊರೆನಾದಿಂದ ಧೋಲ್ಪುರ್​ ಕಡೆಗೆ ಮರಳು ತುಂಬಿದ್ದ ನಾಲ್ಕು ಟ್ರ್ಯಾಕ್ಟರ್​ ಬರುತ್ತಿದ್ದವು. ಇದನ್ನ ತಡೆಯಲು ಮುಂದಾದಾಗ ಮರಳು ಮಾಫಿಯಾ ಗ್ಯಾಂಗ್​ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದೆ.

Firing between sand mafia and police in Rajasthan
Firing between sand mafia and police in Rajasthan

By

Published : Jun 22, 2021, 9:02 PM IST

ಮೊರೆನಾ(ಮಧ್ಯಪ್ರದೇಶ): ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಗ್ಯಾಂಗ್​ ಹಾಗೂ ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಪೊಲೀಸರು ಎರಡು ಟ್ರಾಲಿ ಹಾಗೂ ಟ್ರ್ಯಾಕ್ಟರ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನದ ಧೋಲ್ಪುರ್​​ದಲ್ಲಿ ಈ ಘಟನೆ ನಡೆದಿದ್ದು, ದಾಳಿ ನಡೆಸಿರುವ ಪೊಲೀಸರು ಕೆಲವರು ಬಂಧನ ಮಾಡುವಲ್ಲಿ ಸಹ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ - ರಾಜಸ್ಥಾನ ಗಡಿಯ ಸಾಗರಪಾರ ಪೊಲೀಸ್​ ಪೋಸ್ಟ್​ನಲ್ಲಿ ಧೋಲ್ಪುರ್​​ ಎಂಬಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ವೇಳೆ ಯಾವುದೇ ರೀತಿಯ ಸಾವು - ನೋವು ಸಂಭವಿಸಿಲ್ಲ. ಆರ್​ಎಸಿ ಕಮಾಂಡೋ ವಿಷ್ಣು ಕುಮಾರ್​​ ಈ ದಾಳಿಯ ನೇತೃತ್ವ ವಹಿಸಿಕೊಂಡಿದ್ದರು.

ಪೊಲೀಸರು-ಮರಳು ಮಾಫಿಯಾ ಗ್ಯಾಂಗ್​ ನಡುವೆ ಗುಂಡಿನ ವಾರ್​

ಇದನ್ನೂ ಓದಿರಿ: ಸಹೋದರಿಯರಿಬ್ಬರ ಮೇಲೆ ಗ್ಯಾಂಗ್​ರೇಪ್​.. ಇಬ್ಬರು ಪೊಲೀಸರ ಬಂಧನ

ಚಂಬಲ್​ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಮೊರೆನಾದಿಂದ ಧೋಲ್ಪುರ್​ ಕಡೆಗೆ ಮರಳು ತುಂಬಿದ್ದ ನಾಲ್ಕು ಟ್ರ್ಯಾಕ್ಟರ್​ ಬರುತ್ತಿದ್ದವು. ಇದನ್ನ ತಡೆಯಲು ಮುಂದಾದಾಗ ಮರಳು ಮಾಫಿಯಾ ಗ್ಯಾಂಗ್​ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ತಕ್ಷಣವೇ ಅವರ ಬೆನ್ನಟ್ಟಿರುವ ಪೊಲೀಸ್​ ಪಡೆ ತಿರುಗೇಟು ನೀಡಿದ್ದಾರೆ. ಈ ವೇಳೆ ಶಿವ ಸಿಂಗ್ ಗುರ್ಜಾರ್​ ಎಂಬ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಕೆಲವರು ತಪ್ಪಿಸಿಕೊಂಡಿದ್ದಾರೆ. ಅಕ್ರಮ ಮರಳು ವಶಪಡಿಸಿಕೊಂಡಿರುವ ಪೊಲೀಸರು ಪಿಸ್ತೂಲ್​, ಐದು ಜೀವಂತ ಕಾರ್ಟ್ರಿಜ್​ ವಶಕ್ಕೆ ಪಡೆದಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details