ಕರ್ನಾಟಕ

karnataka

ETV Bharat / bharat

ಜೈಪುರ್ ಹೋಟೆಲ್​ನಲ್ಲಿ ಗುಂಡಿನ ದಾಳಿ: ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್ - ಹೋಟೆಲ್ ಮಾಲೀಕರಿಗೆ ಬೆದರಿಕೆ ಪತ್ರ

ಜೈಪುರದ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದೆ. ಕುಖ್ಯಾತ ಗ್ಯಾಂಗಸ್ಟರ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

firing-outside-jaipur-hotel-in-rajasthan-bishnoi-gang-takes-responsibility
firing-outside-jaipur-hotel-in-rajasthan-bishnoi-gang-takes-responsibility

By

Published : Jan 29, 2023, 8:31 PM IST

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದ ಪ್ರಮುಖ ಹೋಟೆಲ್‌ವೊಂದರಲ್ಲಿ ಶನಿವಾರ ತಡರಾತ್ರಿ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಬಿಷ್ಣೋಯ್ ತಂಡ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 1 ಕೋಟಿ ರೂಪಾಯಿ ಹಣ ನೀಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ದಾಳಿಕೋರರು ಹೋಟೆಲ್ ಮಾಲೀಕರಿಗೆ ಬೆದರಿಕೆ ಪತ್ರ ನೀಡಿ ಪರಾರಿಯಾಗಿದ್ದರು. ಪೂರ್ವ ವಲಯ ಡಿಸಿಪಿ ರಾಜೀವ್ ಪಚಾರ್ ಪ್ರಕಾರ, ರಾಜಧಾನಿಯ ಜವಾಹರ್ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಏರ್‌ಪೋರ್ಟ್ ಪ್ಲಾಜಾದ ಗೇಟ್ ಬಳಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು 19 ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದರು. ಗುಂಡು ಹಾರಿಸಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ. ದಾಳಿಕೋರರು ಸ್ಥಳದಿಂದ ಪರಾರಿಯಾಗುವಾಗ ಹೋಟೆಲ್ ಕಡೆಗೆ ಪತ್ರವನ್ನೂ ಎಸೆದಿದ್ದರು ಎಂದು ಅವರು ತಿಳಿಸಿದರು.

ದಾಳಿಯ ಹೊಣೆ ಹೊತ್ತ ಸೋಶಿಯಲ್ ಮೀಡಿಯಾ ಪೋಸ್ಟ್​

ಪತ್ರದಲ್ಲಿ ದಾಳಿಕೋರರು ಹೋಟೆಲ್ ಮಾಲೀಕನಿಗೆ 1 ಕೋಟಿ ರೂಪಾಯಿ ಹಣ ಕೇಳಿದ್ದು, ಹಣ ಕೊಡಲು ವಿಫಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವ ಮಧ್ಯೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹೃತಿಕ್ ಬಾಕ್ಸರ್ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ ಪೊಲೀಸರು ಸೋಶಿಯಲ್ ಮೀಡಿಯಾ ಪೋಸ್ಟ್‌ನ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದಾಳಿಕೋರರ ಸಂಭಾವ್ಯ ಅಡಗುತಾಣಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದು, ಆರೋಪಿಗಳನ್ನು ಬಂಧಿಸಲು ಜಿಲ್ಲಾ ವಿಶೇಷ ತಂಡ, ಕಮಿಷನರೇಟ್ ವಿಶೇಷ ತಂಡವನ್ನು ಸಹ ನಿಯೋಜಿಸಲಾಗಿದೆ. ಹೋಟೆಲ್ ಮಾಲೀಕ ಹಾಗೂ ದುಷ್ಕರ್ಮಿಗಳ ಮಧ್ಯೆ ಇರಬಹುದಾದ ದ್ವೇಷದ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಘಟನೆಯ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸ್ಥಳದಲ್ಲಿ ದೊರೆತ ಗುಂಡು

ಪಾಟ್ನಾದಲ್ಲಿ ಗುಂಡಿನ ದಾಳಿ, ವಿದ್ಯಾರ್ಥಿ ಸಾವು: ಪಾಟ್ನಾದ ಗಾಂಧಿ ಮೈದಾನದ ಬಳಿ ಸರಸ್ವತಿ ಪೂಜೆ ನಿಮಿತ್ತ ವಿಗ್ರಹ ನಿಮಜ್ಜನದ ಮೆರವಣಿಗೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದರು. ಮೃತರನ್ನು ರಾಜ್ಯದ ಜೆಹಾನಾಬಾದ್ ಜಿಲ್ಲೆಯ ನಿವಾಸಿ ಧೀರಜ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪಾಟ್ನಾ ವಿಶ್ವವಿದ್ಯಾನಿಲಯ ಮತ್ತು ಮಗಧ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಆವರಣದಿಂದ ಮತ್ತು ಇತರ ಹಾಸ್ಟೆಲ್‌ಗಳ ಆವರಣದ ಮೂಲಕ ಮೆರವಣಿಗೆ ಸಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ಮಾತನಾಡಿ, ಸರಸ್ವತಿ ಪೂಜೆ ಮೆರವಣಿಗೆಯು ಸೈದ್‌ಪುರ ಹಾಸ್ಟೆಲ್‌ನಿಂದ ಗಾಂಧಿ ಮೈದಾನದ ಬಳಿ ತಲುಪಿತ್ತು. ಈ ಸಂದರ್ಭದಲ್ಲಿ ಗುಂಡಿನ ದಾಳಿಯಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಪೊಲೀಸರು ಘಟನೆಯ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಆರೋಪಿ ಯುವಕನನ್ನು ಗುರುತಿಸಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ:ಮಹಿಳಾ ಸಹೋದ್ಯೋಗಿಯ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪೊಲೀಸ್​ ಕಾನ್ಸ್​ಟೇಬಲ್

For All Latest Updates

ABOUT THE AUTHOR

...view details