ನವದೆಹಲಿ: ಇಲ್ಲಿನ ಕೋರ್ಟ್ ಆವರಣದಲ್ಲಿ ಇಂದು ಶೂಟೌಟ್ ನಡೆದಿದ್ದು ಗುಂಡಿನ ಸಂಘರ್ಷದಲ್ಲಿ ಮೂವರು ಬಲಿಯಾಗಿರುವ ವರದಿಯಾಗಿದೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಫೈರಿಂಗ್! - ನವದೆಹಲಿಯಲ್ಲಿ ಗುಂಡಿನ ದಾಳಿ
ನವದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆದಿದೆ. ಗ್ಯಾಂಗ್ವಾರ್ನಿಂದ ಈ ಶೂಟೌಟ್ ನಡೆದಿದೆ ಎಂದು ಶಂಕಿಸಲಾಗಿದೆ.
Firing Inside Rohini Court At Delhi
ಇಬ್ಬರು ಶೂಟರ್ಗಳನ್ನು ಸ್ಥಳೀಯ ಪೊಲೀಸರು ಹೊಡೆದುರುಳಿಸಿದ್ದಾರೆ ಎನ್ನಲಾಗುತ್ತಿದ್ದು ಗ್ಯಾಂಗ್ಸ್ಟರ್ ಜಿತೇಂದ್ರ ಗೋಗಿ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ದುಷ್ಕರ್ಮಿಗಳು ವಕೀಲರ ಬಟ್ಟೆ ಧರಿಸಿ ಕೋರ್ಟ್ಗೆ ಬಂದಿದ್ದರೆಂದು ಹೇಳಲಾಗುತ್ತಿದೆ. ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ದೆಹಲಿಯ ಜನ ಬೆಚ್ಚಿಬಿದ್ದಿದ್ದಾರೆ.
Last Updated : Sep 24, 2021, 2:34 PM IST