ಬಠಿಂಡಾ (ಪಂಜಾಬ್):ಪಂಜಾಬ್ನ ಬಠಿಂಡಾ ಮಿಲಿಟರಿ ಠಾಣೆ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ. ತಕ್ಷಣವೇ ಠಾಣೆಗೆ ಭದ್ರತೆ ನೀಡಲಾಗಿದ್ದು, ಸೈನಿಕರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.
ಇಂದು ಬೆಳಗ್ಗೆ 4.35 ರ ಸುಮಾರಿಗೆ ಠಾಣೆಯ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ದಾಳಿ ಆಂತರಿಕವಾಗಿ ನಡೆದಿದೆ ಎಂದು ನಂತರ ತಿಳಿದು ಬಂದಿತ್ತು. ಅಪರಿಚಿತರ ದಾಳಿ ವೇಳೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಈ ವೇಳೆ ಮೃತ ಯೋಧರೆಲ್ಲ ಮಲಗಿದ್ದರು ಎಂದು ತಿಳಿದು ಬಂದಿದೆ. ಘಟನೆ ತಿಳಿದ ತಕ್ಷಣ ಕ್ಷಿಪ್ರ ಕಾರ್ಯಾಚರಣೆಗೆ ಸೇನಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಠಾಣೆಯ ಮೇಲೆ ದಾಳಿ ಮಾಡಿದವರ ಬಗ್ಗೆ ಪತ್ತೆ ಮಾಡಲಾಗುವುದು ಎಂದು ಸೌತ್ ವೆಸ್ಟರ್ನ್ ಕಮಾಂಡ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಶಂಕಿತನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಿಂದೆ ಪಂಜಾಬ್ ಪೊಲೀಸರು ಘಟನೆ ಭಯೋತ್ಪಾದಕರ ದಾಳಿಯಲ್ಲ ಎಂದು ಹೇಳಿದ್ದರು. ಗುಂಡು ಹಾರಿಸಿದ ಪಾತಕಿಗಳನ್ನು ಹೆಡೆಮುರಿ ಕಟ್ಟಲಾಗುವುದು ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. ಬಂಠಿಡಾದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.
ಘಟನೆಯಲ್ಲಿ ಕರ್ನಾಟಕದ ಇಬ್ಬರು ಯೋಧರು ಮೃತ:ಮಾಹಿತಿ ಪ್ರಕಾರ ಮೃತ ಯೋಧರಲ್ಲಿ ಕರ್ನಾಟಕದ ಇಬ್ಬರು ಮತ್ತು ತಮಿಳುನಾಡಿನ ಇಬ್ಬರು ಎಂದು ಗುರುತಿಸಲಾಗಿದೆ. ಮೃತ ಯೋಧರನ್ನು ಚಾಲಕ ಎಂ.ಟಿ.ಸಂತೋಷ್ ಎಂ.ನಾಗರ ಹಾಗೂ ಎಂ.ಟಿ.ಕಮಲೇಶ್ ಆರ್, ಎಂ.ಟಿ.ಸಾಗರ್ ಬನ್ನೆ ಹಾಗೂ ಗನ್ನರ್ ಯೋಗೀಶ್ ಕುಮಾರ್ ಜೆ ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಸಂಬಂಧಿಕರಿಗೆ ಯೋಧರ ಸಾವಿನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದೂ ಸೇನಾಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಭಠಿಂಡಾ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ದಾಳಿಯ ಪ್ರಮುಖ ಅಂಶಗಳು:
1. ನಿನ್ನೆಯಷ್ಟೇ ಸೇನೆಯಿಂದ ರೈಫಲ್‌ಗಳು ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿರುವುದಾಗಿ ಬಂಠಿಡಾ ಕ್ಯಾಂಪ್ನ ಎಸ್‌ಎಚ್‌ಒ ಗುರುದೀಪ್ ಸಿಂಗ್ ಹೇಳಿದ್ದಾರೆ. ಈ ನಡುವೆ ಇಂದು ಗುಂಡಿನ ದಾಳಿ ಪ್ರಕರಣ ದಾಖಲಾಗಿದೆ.