ಮಾಲೆಗಾಂವ್ (ನಾಸಿಕ್) :ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಚಲನಚಿತ್ರಗಳಿಗಾಗಿ ನಟರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇವರ ಸಿನಿಮಾ ರಿಲೀಸ್ ಆದಾಗ ಸಂಭ್ರಮಾಚರಣೆ ಸಹ ಜೋರಾಗೆ ಇರುತ್ತದೆ. ಆದರೆ ಮಾಲೆಗಾಂವ್ನಲ್ಲಿ ಅಭಿಮಾನಿಗಳ ಸಂಭ್ರಮ ಅವಘಡಕ್ಕೆ ಕಾರಣವಾಗಿದೆ.
ರಾಕೇಶ್ ರೋಶನ್ ಅವರ “ಕರಣ್ ಅರ್ಜುನ್” ಪ್ರದರ್ಶನದ ಸಮಯದಲ್ಲಿ, ಶಾರುಖ್ ಖಾನ್ ಮತ್ತು ಸಲ್ಮಾನ್ ಎಂಟ್ರಿ ಸೀನ್ ಸಮಯದಲ್ಲಿ ಜನರ ಗುಂಪು ಪಟಾಕಿಗಳನ್ನು ಸಿಡಿಸಿಲು ಪ್ರಾರಂಭಿಸಿತು. ಈ ವೇಳೆ ಬೆಂಕಿಯ ಕಿಡಿ ಆಸನಗಳಿಗೆ ಸಿಡಿದು, ಥಿಯೇಟರ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು. ಈ ವೇಳೆ, ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಫೆ.12 ರಂದು ಜರುಗಿದ್ದು, ಮಾಲೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.