ಕರ್ನಾಟಕ

karnataka

ETV Bharat / bharat

ಪ್ರಮುಖ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​!

ನಿನ್ನೆಯಷ್ಟೇ ವಿರುಧುನಗರದ ಸತೂರ್​ ಪ್ರದೇಶದಲ್ಲಿನ ಮರಿಯಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಉಂಟಾದ ಸ್ಫೋಟದಲ್ಲಿ 19 ಮಂದಿ ಕಾರ್ಮಿಕರು ಬಲಿಯಾಗಿದ್ದರು. ಈ ದುರಂತದ ಬೆನ್ನಲ್ಲೇ ಇಂದು ತಮಿಳುನಾಡಿನ ವಿರುಧುನಗರ್​​ನ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.

Firecracker factory accidents in India
ಪ್ರಮುಖ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​!

By

Published : Feb 13, 2021, 6:44 PM IST

ಹೈದರಾಬಾದ್: ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತ ಮತ್ತೊಮ್ಮೆ ದೇಶದಲ್ಲಿ ಪಟಾಕಿ ಕಾರ್ಖಾನೆಯ ಸ್ಫೋಟಗಳ ಬಗ್ಗೆ ಗಮನ ಸೆಳೆದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

ನಿನ್ನೆಯಷ್ಟೇ ವಿರುಧುನಗರದ ಸತೂರ್​ ಪ್ರದೇಶದಲ್ಲಿನ ಮರಿಯಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಉಂಟಾದ ಸ್ಫೋಟದಲ್ಲಿ 19 ಮಂದಿ ಕಾರ್ಮಿಕರು ಬಲಿಯಾಗಿದ್ದರು. ಈ ದುರಂತದ ಬೆನ್ನಲ್ಲೇ ಇಂದು ತಮಿಳುನಾಡಿನ ವಿರುಧುನಗರ್​​ನ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.

ಪಟಾಕಿ ಕಾರ್ಖಾನೆಯಲ್ಲಿ ಹೆಚ್ಚಿನ ಸ್ಫೋಟ ಘಟನೆಗಳಿಗೆ ಸಾಕ್ಷಿಯಾಗಿರುವ ತಮಿಳುನಾಡು, ಇತ್ತೀಚಿನ ಅಪಘಾತದೊಂದಿಗೆ ಮತ್ತೊಮ್ಮೆ ಜನರ ಗಮನವನ್ನು ತನ್ನೆಡೆಗೆ ಸೆಳೆದಿದೆ. ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರೂ ತಮಿಳುನಾಡಿನಲ್ಲಿ ಅಪಘಾತಗಳು ಪುನರಾವರ್ತನೆಯಾಗಿವೆ.

ಭಾರತದಲ್ಲಿ ನಡೆದ ಕೆಲವು ಪ್ರಮುಖ ಪಟಾಕಿ ಕಾರ್ಖಾನೆ ಅಪಘಾತಗಳ ಪಟ್ಟಿ ಇಲ್ಲಿದೆ:

ಪ್ರಮುಖ ಪಟಾಕಿ ಕಾರ್ಖಾನೆ ಅಪಘಾತಗಳ ಪಟ್ಟಿ

ಈ ಸುದ್ದಿಯನ್ನೂ ಓದಿ:ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಕಾರ್ಮಿಕ ಸಾವು

ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಸಿ ಪಟ್ಟಣವು ಪಟಾಕಿ, ಬೆಂಕಿಕಡ್ಡಿ ಮತ್ತು ಮುದ್ರಣ ಉದ್ಯಮಗಳಿಗೆ ಹೆಸರುವಾಸಿಯಾಗಿದೆ. ಶಿವಕಾಸಿಯಲ್ಲಿನ ಕೈಗಾರಿಕೆಗಳು 2,50,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದು, ಅಂದಾಜು ವಾರ್ಷಿಕ ವಹಿವಾಟು 20 ಬಿಲಿಯನ್ ರೂ. ಇದೆ.

ABOUT THE AUTHOR

...view details