ಕರ್ನಾಟಕ

karnataka

ETV Bharat / bharat

ಒಡಿಶಾ: ಪಟಾಕಿ ಸಿಡಿಸುವ ಸ್ಪರ್ಧೆಯಲ್ಲಿ ಅವಘಡ; 40 ಮಂದಿಗೆ ಗಾಯ - ಅಗ್ನಿಶಾಮಕ ದಳದ ಸಿಬ್ಬಂದಿ

ಸ್ಪರ್ಧಿಗಳು ಪಟಾಕಿ ಸಿಡಿಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾಗ ಪಕ್ಕದಲ್ಲೇ ಇರಿಸಿದ್ದ ಪಟಾಕಿ ರಾಶಿಗೆ ಕಿಡಿ ಹಾರಿ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

40 injured in firecracker explosion in Odisha
ಒಡಿಶಾದಲ್ಲಿ ಪಟಾಕಿ ಸ್ಫೋಟಗೊಂಡು 40 ಮಂದಿಗೆ ಗಾಯ

By

Published : Nov 24, 2022, 1:32 PM IST

ಕೇಂದ್ರಪಾರ (ಒಡಿಶಾ): ಒಡಿಶಾದ ಕೇಂದ್ರಪಾರ ಜಿಲ್ಲೆಯ ಬಲಿಯಾ ಬಜಾರ್‌ನಲ್ಲಿ ಬುಧವಾರ ರಾತ್ರಿ ಕಾರ್ತಿಕೇಶ್ವರ ದೇವರ ನಿಮಜ್ಜನ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಪಟಾಕಿ ಸ್ಪರ್ಧೆಯಲ್ಲಿ ಪಟಾಕಿ ಸಿಡಿದು 40 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲಿಯಾ ಬಜಾರ್‌ನ ನಿಮಜ್ಜನ ಸ್ಥಳದಲ್ಲಿ ಏರ್ಪಡಿಸಿದ್ದ ಸ್ಫರ್ಧೆಯಲ್ಲಿ ಪಟಾಕಿ ಸಿಡಿಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾಗ ಪಕ್ಕದಲ್ಲೇ ಇರಿಸಿದ್ದ ಪಟಾಕಿ ರಾಶಿಗೆ ಕಿಡಿ ಹಾರಿ ಸ್ಫೋಟಗೊಂಡಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೂವರು ಕಾರ್ಮಿಕರ ಸಾವು

ABOUT THE AUTHOR

...view details