ವಿಶಾಖಪಟ್ಟಣಂ, ಆಂಧ್ರಪ್ರದೇಶ : ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ರಣವಿಜಯ್ನಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ನೌಕಾಪಡೆಯ ತಂಡಗಳು ಬೆಂಕಿಯನ್ನು ಹತೋಟಿಗೆ ತಂದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ನಾಲ್ವರು ಸಿಬ್ಬಂದಿಗೆ ಸುಟ್ಟಗಾಯಳಾಗಿದ್ದು, ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಲ್ಲಿರುವ ಐಎನ್‌ಎಚ್‌ಎಸ್ ಕಲ್ಯಾಣಿ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.