ಲಕ್ನೋ(ಉತ್ತರ ಪ್ರದೇಶ):ಇಲ್ಲಿನ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದು ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸಿ, ಮನೆಯಲ್ಲಿ ಸಿಲುಕಿದ್ದ ಅಧಿಕಾರಿ ಹಾಗು ಅವರ ಪತ್ನಿ ಮತ್ತು ಪುತ್ರನನ್ನು ರಕ್ಷಿಸಿ ಲೋಹಿಯಾ ಆಸ್ಪತ್ರೆ ದಾಖಲಿಸಿದ್ದರು.
ಮನೆಯಲ್ಲಿ ಅಗ್ನಿ ಅವಘಡ: ನಿವೃತ್ತ IPS ಅಧಿಕಾರಿ ಸಾವು, ಪತ್ನಿ-ಪುತ್ರನಿಗೆ ಗಾಯ - ಈಟಿವಿ ಭಾರತ ಕನ್ನಡ
ಉತ್ತರ ಪ್ರದೇಶದ ಲಕ್ನೋದಲ್ಲಿ ಶನಿವಾರ ತಡರಾತ್ರಿ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿತು.
ನಿವೃತ್ತ ಐಪಿಎಸ್ ಅಧಿಕಾರಿ ಮನೆಯಲ್ಲಿ ಬೆಂಕಿ ಅವಘಡ
ಅವಘಡದಲ್ಲಿ ತೀವ್ರವಾಗಿ ಗಾಯಗೊಂಡ ಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಚಂದ್ ಪಾಂಡೆ ಲೋಹಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಪುತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಘಾಜಿಪುರ ಠಾಣಾ ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ:ಜೀವ ನುಂಗಿದ ಗುಡ್ಡ.. ಭೂಕುಸಿತದಲ್ಲಿ ಒಂದೇ ಕುಟುಂಬದ ನಾಲ್ವರು ಸಮಾಧಿ