ಕರ್ನಾಟಕ

karnataka

ETV Bharat / bharat

ಸ್ಟೇಷನ್​ನಲ್ಲಿ ನಿಂತಿದ್ದ ಪ್ಯಾಸೆಂಜರ್​ ರೈಲಿಗೆ ಬೆಂಕಿ: ಹೊತ್ತಿ ಉರಿದ ಬೋಗಿಗಳು - ರೋಹ್ಟಕ್ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಬೆಂಕಿ

ಸ್ಟೇಷನ್​ನಲ್ಲಿ ನಿಂತಿದ್ದ ಪ್ರಯಾಣಿಕ ರೈಲಿಗೆ ಬೆಂಕಿ ತಗುಲಿದ ಪರಿಣಾಮ ರೈಲಿನ ಮೂರು ಬೋಗಿಗಳು ಸುಟ್ಟು ಬೂದಿಯಾಗಿರುವ ಘಟನೆ ಹರಿಯಾಣದ ರೋಹ್ತಕ್​ನಲ್ಲಿ ನಡೆದಿದೆ.

fire in passenger train standing at rohtak railway station
ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕ ರೈಲಿಗೆ ಬೆಂಕಿ

By

Published : Apr 8, 2021, 4:43 PM IST

ರೋಹ್ತಕ್​:ಹರಿಯಾಣದ ರೋಹ್ತಕ್​​ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ರೈಲಿನ ಮೂರು ಬೋಗಿಗಳು ಸುಟ್ಟು ಕರಕಲಾಗಿವೆ.

ಅಗ್ನಿ ಶಮನಕ್ಕೆ ಅಗ್ನಿಶಾಮಕ ಸಿಬ್ಬಂದಿ ಮುಂದಾಗಿರುವ ದೃಶ್ಯ

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅಗ್ನಿ ಶಮನಕ್ಕೆ ಹರಸಾಹಸಪಟ್ಟರು. ದುರ್ಘಟನೆಗೊಳಗಾದ ರೈಲು ರೋಹ್ತಕ್​ನಿಂದ ದೆಹಲಿಗೆ ತೆರಳುತ್ತಿತ್ತು.

ಈ ಅವಘಡದ ಸಮಯದಲ್ಲಿ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಏಕೆಂದರೆ, ರೈಲು ರೋಹತಕ್​ನಿಂದ ದೆಹಲಿಗೆ ಸಂಜೆ 4.10 ಕ್ಕೆ ಹೊರಡಬೇಕಾಗಿತ್ತು. ಶಾರ್ಟ್ ಸರ್ಕ್ಯೂಟ್​​​ನಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಓದಿ:ವಾಹನಗಳಿಗೆ ಇಂಧನ ತುಂಬಿಸುವುದು ಯಾವುದೇ ಪರೀಕ್ಷೆಗೆ ಕಡಿಮೆ ಇಲ್ಲ: ಮೋದಿಗೆ ರಾಹುಲ್​ ಟಾಂಗ್​!

ABOUT THE AUTHOR

...view details