ಕರ್ನಾಟಕ

karnataka

ETV Bharat / bharat

ಕಾಡಿಗೆ ಬೆಂಕಿ: ಹೊತ್ತಿ ಉರಿದ ನೈಸರ್ಗಿಕ ಸಂಪತ್ತು.. ದೋಡಾ ಅಪಘಾತದಲ್ಲಿ ಆರು ಸಾವು - ಉಧಂಪುರ ಜಿಲ್ಲೆಯ ಬಸಂತ್‌ಗಢ ತಹಸಿಲ್‌ನ ಚಾಕಲ್ ಗ್ರಾಮ

ತಹಸಿಲ್‌ನ ಚಾಕಲ್ ಗ್ರಾಮದ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ನಿನ್ನೆ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ಯಾವುದೇ ಆಸ್ತಪಾಸ್ತಿ ನಷ್ಟ ಆಗಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

fire-broke-out-in-the-forest
ಕಾಡಿಗೆ ಬೆಂಕಿ: ಹೊತ್ತಿ ಉರಿದ ನೈಸರ್ಗಿಕ ಸಂಪತ್ತು

By

Published : Dec 14, 2021, 9:22 PM IST

ಶ್ರೀನಗರ: ಉಧಂಪುರ ಜಿಲ್ಲೆಯ ಬಸಂತ್‌ಗಢ ತಹಸಿಲ್‌ನ ಚಾಕಲ್ ಗ್ರಾಮದ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ನಿನ್ನೆ ತಡರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅನುಮಾನಾಸ್ಪದವಾಗಿ ಕಾಡಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕಾಡಿನಲ್ಲಿ ಸಾಕಷ್ಟು ದೇವದಾರು ಮರಗಳಿವೆ. ಇನ್ನು ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಮುಂದಾಗಿದೆ.

ಇದನ್ನೂ ಓದಿ: ಅವರು ಬಟ್ಟೆ ಬಿಚ್ಚಿದ್ದನ್ನು ನಾವೆಲ್ಲರೂ ನೋಡಿದ್ದೇವೆ: ಬೆಳಗಾವಿಗೆ ಬರುತ್ತಿದ್ದಂತೆ ಡಿಕೆಶಿ ಟಾಂಗ್

ಈ ಬಗ್ಗೆ ಬಸಂತಗಢ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಮಾತನಾಡಿ, ಇದು ಬಹಳ ದೂರದ ಅರಣ್ಯವಾಗಿದ್ದು, ಇದರಲ್ಲಿ ಯಾವುದೇ ರೀತಿಯ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಆದರೆ, ಇಲ್ಲಿಗೆ ತಲುಪುವುದು ತುಂಬಾ ಕಷ್ಟಕರವಾಗಿದೆ ಮತ್ತು ಮೇಲಿನಿಂದ ತುಂಬಾ ಚಳಿ ಇದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೆಂಕಿ ನಂದಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದಿದ್ದಾರೆ.

ದೋಡಾದಲ್ಲಿ ಭೀಕರ ಅಪಘಾತ, 6 ಮಂದಿ ಸಾವು:

ಚುಮಾತ್ರಿ ನಲ್ಲಹಾದಲ್ಲಿ ಟೆಂಪೋ ಅಪಘಾತಕ್ಕೀಡಾಗಿದೆ. ಪರಿಣಾಮ 6 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಎಂಟರಿಂದ ಹತ್ತು ಮಂದಿ ಗಾಯಗೊಂಡಿದ್ದಾರೆ.

ABOUT THE AUTHOR

...view details