ಕರ್ನಾಟಕ

karnataka

ETV Bharat / bharat

ಗಾಂಧಿಧಾಮ್-ಪುರಿ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಕಿ: ಅಗ್ನಿಶಾಮಕದಳದಿಂದ ಬೆಂಕಿ ನಂದಿಸಲು ಹರಸಾಹಸ - ನಂದೂರ್​ಬಾರ್ ರೈಲು ನಿಲ್ದಾಣದಲ್ಲಿ ರೈಲಿಗೆ ಬೆಂಕಿ

ಮಹಾರಾಷ್ಟ್ರದ ನಂದೂರ್​ಬಾರ್ ರೈಲ್ವೆ ನಿಲ್ದಾಣದಲ್ಲಿ ಗಾಂಧಿಧಾಮ್-ಪುರಿ ಎಕ್ಸ್​ಪ್ರೆಸ್​​ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿದ್ದಾರೆ.

Fire Broke Out In Gandhidham Express At Nandurbar Railway Station
ಗಾಂಧಿಧಾಮ್-ಪುರಿ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಕಿ

By

Published : Jan 29, 2022, 11:45 AM IST

Updated : Jan 29, 2022, 11:58 AM IST

ನಂದೂರ್​ಬಾರ್, ಮಹಾರಾಷ್ಟ್ರ:ರೈಲಿನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ನಂದೂರ್​ಬಾರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರಕ್ಷಣಾ ಕಾರ್ಯಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿವೆ.

ಗಾಂಧಿಧಾಮ್ ಎಕ್ಸ್​ಪ್ರೆಸ್​ ರೈಲಿನ ಬೋಗಿಯಲ್ಲಿ ಬೆಳಗ್ಗೆ 10.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೋಗಿ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಪ್ರಾಣಾಪಾಯದ ಬಗ್ಗೆ ಇನ್ನೂ ವರದಿಯಾಗಿಲ್ಲ.

ಗಾಂಧಿಧಾಮ್-ಪುರಿ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಕಿ

ರೈಲು ಗಾಂಧಿಧಾಮದಿಂದ ಪುರಿಯ ಕಡೆಗೆ ಹೊರಟಿತ್ತು. ನಂದೂರ್ಬಾರ್ ರೈಲು ನಿಲ್ದಾಣದಿಂದ ರೈಲು ಸ್ವಲ್ಪ ದೂರದಲ್ಲಿದ್ದಾಗ, ರೈಲಿನ ಪ್ಯಾಂಟ್ರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದ ತಕ್ಷಣ ರೈಲನ್ನು ನಿಲ್ಲಿಸಲಾಗಿದೆ.

ಬಳಿಕ ಪ್ರಯಾಣಿಕರು ರೈಲಿನಿಂದ ಹೊರಬಂದಿದ್ದು, ನಂದೂರ್​ಬಾರ್ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಎರಡು ಕೋಚ್​ಗಳಲ್ಲಿ ಬೆಂಕಿ ಆವರಿಸಿದ್ದು, ಅವುಗಳನ್ನು ಇತರ ಕೋಚ್​ಗಳಿಂದ ಬೇರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 11:58 AM IST

ABOUT THE AUTHOR

...view details