ಕೋಲ್ಕತಾ: ಪಶ್ಚಿಮ ಬಂಗಾಳದ ನ್ಯೂ ಟೌನ್‌ನ ನಿವೇದಿತಾ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಗುಡಿಸಲುಗಳು ಭಸ್ಮವಾಗಿವೆ.
ಕೋಲ್ಕತ್ತಾದ ನ್ಯೂ ಟೌನ್‌ನ ಕೊಳಗೇರಿಯಲ್ಲಿ ಬೆಂಕಿ: ಹತ್ತಾರು ಗುಡಿಸಲುಗಳು ಭಸ್ಮ - Fire breaks in slum area of Kolkata
ಕೋಲ್ಕತ್ತಾದ ನ್ಯೂ ಟೌನ್‌ನ ನಿವೇದಿತಾ ಪಾಳ್ಯದ ಕೊಳಗೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಐದು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಇದಕ್ಕೆ ಸ್ಥಳೀಯರು ಕೂಡ ಕೈಜೋಡಿಸಿದ್ದಾರೆ.
ಬೆಂಕಿ
ಐದು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಇದಕ್ಕೆ ಸ್ಥಳೀಯರು ಕೂಡ ಕೈಜೋಡಿಸಿದ್ದಾರೆ. ಸಾವು-ನೋವು, ಗಾಯಗೊಂಡವರ ಬಗ್ಗೆ ವರದಿಯಾಗಿಲ್ಲ.
ವರದಿಗಳ ಪ್ರಕಾರ, ಸುಮಾರು 10-12 ಗುಡಿಸಲುಗಳು ಬೆಂಕಿಯಿಂದಾಗಿ ನಾಶವಾಗಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.