ಮುಂಬೈ:ಇಲ್ಲಿನ ಮಲಾಡ್ ಈಸ್ಟ್ ದಿಂಡೋಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಯಾರಡೈಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ಆವರಣದಲ್ಲಿರುವ ಡಾಂಬರು ಕಾರ್ಖಾನೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ 80 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟುಕರಕಲಾಗಿದೆ.
ಮಹಾರಾಷ್ಟ್ರ: ಡಾಂಬರು ಕಾರ್ಖಾನೆಗೆ ಬೆಂಕಿ, ಸುತ್ತಮುತ್ತಲ 80 ಅಂಗಡಿಗಳು ಸುಟ್ಟುಕರಕಲು - mumbai News 2021
ಮಹಾರಾಷ್ಟ್ರದ ಮಲಾಡ್ ಈಸ್ಟ್ ದಿಂಡೋಸಿ ಪೊಲೀಸ್ ಠಾಣೆ ವ್ಯಾಪ್ತಿಯ ಡಾಂಬರು ಕಾರ್ಖಾನೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, 80 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿದೆ.
ಮಹಾರಾಷ್ಟ್ರ
ಸದ್ಯ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಟ್ಟಿದ್ದು, ಸುಮಾರು 4 ಗಂಟೆಗಳ ಕಠಿಣ ಹೋರಾಟದ ನಂತರ ಬೆಂಕಿಯನ್ನು ನಿಯಂತ್ರಿಸಲಾಯಿತು. ಇನ್ನು 30 ರಿಂದ 40 ವಾಹನಗಳು ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿವೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.