ಅಮರಾವತಿ(ಆಂಧ್ರಪ್ರದೇಶ):ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪರ್ಚೂರು ಮಂಡಲದ ತಿಮ್ಮರಾಜುಪಾಲೆಂನಲ್ಲಿ ಖಾಸಗಿ ಬಸ್ವೊಂದಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಖಾಸಗಿ ಬಸ್ ಹೈದರಾಬಾದ್ನಿಂದ ಪ್ರಕಾಶಂ ಜಿಲ್ಲೆಯ ಚಿರಾಲಕ್ಕೆ ಬರುತ್ತಿತ್ತು ಎನ್ನಲಾಗ್ತಿದೆ. ಈ ವೇಳೆ ತಿಮ್ಮರಾಜುಪಾಲೆಂನಲ್ಲಿ ಬರುತ್ತಿದ್ದಾಗ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬಸ್ಸಿನಲ್ಲಿದ್ದ ಅಲಾರಂ ಮೊಳಗಿದೆ. ಎಚ್ಚೆತ್ತುಕೊಂಡ ಪ್ರಯಾಣಿಕರು ದಿಢೀರನೇ ಬಸ್ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.