ನವದೆಹಲಿ/ಗಾಜಿಯಾಬಾದ್:ಈ ಹಿಂದೆಪ್ರಧಾನಿ ಮೋದಿಯ ಆಧ್ಯಾತ್ಮಿಕ ಗುರು ಎಂದು ಹೇಳಿ ಜನರನ್ನು ವಂಚಿಸಿ ಜೈಲಿಗೆ ಹೋಗಿದ್ದ ಪುಲ್ಕಿತ್ ಮಹಾರಾಜ್ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಗುರೂಜಿ ಒಂದು ಸಮುದಾಯದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಗಾಜಿಯಾಬಾದ್‌ನ ಸಾಹಿಬಾಬಾದ್ನ ಶಾಲಿಮಾರ್ ಗಾರ್ಡನ್ ನಗರದಲ್ಲಿ ಪುಲ್ಕಿತ್ ಮಹಾರಾಜ್ ಮನೆಯಿದೆ. ಪುಲ್ಕಿತ್ ಮಹಾರಾಜ್ ಮಾತನಾಡಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಸಖತ್ ವೈರಲ್ ಆಗ್ತಿದೆ. ವಿಡಿಯೋದಲ್ಲಿ ಮಹಾರಾಜ್ ಸಮುದಾಯವೊಂದಕ್ಕೆ ಆಕ್ಷೇಪಾರ್ಹ ಮಾತುಗಳನ್ನಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋದ ಬಗ್ಗೆ ಪೊಲೀಸರು ಗಮನಹರಿಸಬೇಕು ಎಂದು ಕೆಲವರು ಮನವಿ ಮಾಡಿದ್ದಾರೆ.