ಅಮರಾವತಿ(ಆಂಧ್ರಪ್ರದೇಶ):ಕೇಂದ್ರ ಸರ್ಕಾರದ ಭಾರತ್ ನೆಟ್ ಯೋಜನೆ ಭಾಗವಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಇಂಟರ್ನೆಟ್ ಮತ್ತು ದೂರವಾಣಿ ಸೇವೆ ಒದಗಿಸುವ ಯೋಜನೆಯಾಗಿದೆ. ನ್ಯಾಷನಲ್ ಅಪ್ಟಿಕ್ ಫೈಬರ್ ನೆಟ್ವರ್ಕ್ ಅಡಿಯಲ್ಲಿ ಫೈಬರ್ನೆಟ್ ಯೋಜನೆಗೆ ಕೇಂದ್ರ 3,840 ಕೋಟಿ ರೂ. ಅನುದಾನ ನೀಡಿದೆ. ಆದರೆ, ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಆಂಧ್ರಪ್ರದೇಶದ ಅಪರಾದ ತನಿಖಾ ಇಲಾಖೆ ಫೈಬರ್ ನೆಟ್ ಲಿಮಿಟೆಡ್ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಎಫ್ಐಆರ್ ದಾಖಲು ಮಾಡಿದ್ದು, 321 ಕೋಟಿ ರೂ. ಹಗರಣ ಇದಾಗಿದೆ ಎಂದು ತಿಳಿಸಿದೆ. ಜೊತೆಗೆ 16 ವ್ಯಕ್ತಿಗಳು ಹಾಗೂ ಎರಡು ಕಂಪನಿಗಳು ಇದರಲ್ಲಿ ಆರೋಪಿಗಳೆಂದು ಹೆಸರಿಸಿದೆ. ವೇಮುರಿ ಹರಿಕೃಷ್ಣ ಪ್ರಸಾದ್, ಟೆರಾ ಸಾಫ್ಟವೇರ್ ಲಿಮಿಟೆಡ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಂಪನಿಗೆ 321 ಕೋಟಿ ರೂ. ಟೆಂಡರ್ ಅಕ್ರಮವಾಗಿ ನೀಡಲಾಗಿದೆ ಎಂಬುದು ತಿಳಿದು ಬಂದಿದೆ.