ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಕಾರ್ಯಕರ್ತನಿಗೆ ಕೊಲೆ ಬೆದರಿಕೆ: ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್ ದಾಖಲು

ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸದಿದ್ದರೆ ಕೊಲೆ ಮಾಡುವುದಾಗಿ ಕಾಂಗ್ರೆಸ್ ಕಾರ್ಯಕರ್ತನಿಗೆ ಬೆದರಿಕೆಯೊಡ್ಡಿದ್ದ ಬಿಜೆಪಿ ಅಭ್ಯರ್ಥಿ ದಿಗಂತಾ ಕಲಿತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

fir-filed-against-bjp-candidate-in-assam-for-threatening-to-kill-congress-worker
ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್ ದಾಖಲು

By

Published : Apr 4, 2021, 3:47 AM IST

Updated : Apr 4, 2021, 6:21 AM IST

ಕಾಮರೂಪ್ (ಅಸ್ಸೋಂ):ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸದಿದ್ದರೆ ಕೊಲೆ ಮಾಡುವುದಾಗಿ ಕಾಂಗ್ರೆಸ್ ಕಾರ್ಯಕರ್ತನಿಗೆ ಬೆದರಿಕೆಯೊಡ್ಡಿದ್ದ ಕಮಲ್‌ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿಗಂತಾ ಕಲಿತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಸ್ಸೋಂ ವಿಧಾನಸಭಾ ಚುನಾವಣೆಯಲ್ಲಿ​ ಅಭ್ಯರ್ಥಿ ಕಿಶೋರ್ ಭಟ್ಟಾಚಾರ್ಯ ಅವರನ್ನು ಬೆಂಬಲಿಸಿದ್ದಕ್ಕಾಗಿ ದಿಗಂತಾ ಕಲಿತಾ ಅವರು ಕಾಂಗ್ರೆಸ್ ಕಾರ್ಯಕರ್ತ ಪಾರ್ಷ ಜ್ಯೋತಿ ಕಲಿತಾಗೆ ಬೆದರಿಕೆ ಹಾಕಿದ್ದಾರೆ. ಕಾರ್ಯಕರ್ತ ಪಾರ್ಷ ದಿವಂಗತ ಕಾಂಗ್ರೆಸ್ ಶಾಸಕ ಉತ್ತರ ಕಾಳಿತಾ ಅವರ ಪುತ್ರ.

ದಿಗಂತಾ ಕಲಿತಾ ಅವರು ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಪಾರ್ಷಗೆ ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್​​ನಲ್ಲಿ ಹೇಳಲಾಗಿದೆ. ಪಾರ್ಷ ಮತ್ತು ಕುಟುಂಬ ಸದಸ್ಯರು ತಮ್ಮ ನಿವಾಸದಿಂದ ಹೊರಗಡೆ ಹೊರಟಿದ್ದಾಗ, ದಿಗಂತಾ ಮತ್ತು ಇತರರು ಆಯುಧಗಳೊಂದಿಗೆ ಹಿಂಬಾಲಿಸಿದ್ದರು ಎನ್ನಲಾಗಿದೆ.

ಕಮಲ್‌ಪುರದಲ್ಲಿ ಏಪ್ರಿಲ್ 1ರಂದು ಅಸ್ಸೋಂ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ ಮೂರನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಗೆ ಏಪ್ರಿಲ್ 6ರಂದು ಮತದಾನವಿದ್ದು, ಮತ ಎಣಿಕೆ ಮೇ 2ರಂದು ನಡೆಯಲಿದೆ.

Last Updated : Apr 4, 2021, 6:21 AM IST

ABOUT THE AUTHOR

...view details