ಮೀರತ್(ಉತ್ತರ ಪ್ರದೇಶ): ಶಾಲೆಯ ಶಿಕ್ಷಕಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಶಿಕ್ಷಕಿಗೆ ಪ್ರತಿದಿನ ತರಗತಿಯಲ್ಲಿ ಮತ್ತು ಶಾಲೆಯ ಆವರಣದಲ್ಲಿ "ಐ ಲವ್ ಯೂ ಮೇರಿ ಜಾನ್" ಎಂದು ಅಣುಕಿಸುತ್ತಿದ್ದರು ಮತ್ತು ಅಶ್ಲೀಲ ಪದಗಳಿಂದ ನಿಂದನೆ ಮಾಡುತ್ತಿದ್ದರು.
ಹೀಗೆಲ್ಲಾ ಮಾಡಬೇಡಿ ಎಂದು ಶಿಕ್ಷಕಿ ಸಮಾಧಾದಿಂದ ಕೇಳಿಕೊಂಡರೂ ಸಹ ವಿದ್ಯಾರ್ಥಿಗಳು ಸುಮ್ಮನಾಗಲಿಲ್ಲ ಮತ್ತೆ ಆದೇ ರೀತಿಯಲ್ಲಿ ಅಣುಕಿಸುವುದನ್ನು ಮುಂದುವರೆಸಿದ್ದರು. ಇದರಿಂದ ಮನನೊಂದ ಶಿಕ್ಷಕಿ ಮೂವರು ವಿದ್ಯಾರ್ಥಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.