ಕರ್ನಾಟಕ

karnataka

ETV Bharat / bharat

ಸ್ವಪ್ನಾ ಪಾಟ್ಕರ್​​ಗೆ ​​ಬೆದರಿಕೆ ಹಾಕಿದ ಆರೋಪ: ಸಂಜಯ್ ರಾವುತ್ ವಿರುದ್ಧ ಎಫ್‌ಐಆರ್ - ಪತ್ರಾ ಚಾಲ್ ಭೂ ಪ್ರಕರಣ

ಹಿರಿಯ ಇನ್ಸ್‌ಪೆಕ್ಟರ್ ಪ್ರದೀಪ್ ಮೋರೆ ನೀಡಿದ ಮಾಹಿತಿಯ ಪ್ರಕಾರ, ಸಂಜಯ್ ರಾವುತ್ ವಿರುದ್ಧ ವಕೋಲಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 504, 506, 509 ರ ಅಡಿ ಪ್ರಕರಣ ದಾಖಲಾಗಿದೆ.

Swapna Patkar and Sanjay Raut
ಸ್ವಪ್ನಾ ಪಾಟ್ಕರ್ ಹಾಗೂ ಸಂಜಯ್ ರಾವತ್

By

Published : Aug 1, 2022, 8:51 AM IST

ಮುಂಬೈ:ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಅವರಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಮುಂಬೈನಲ್ಲಿ ಸಂಜಯ್ ರಾವುತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಕೋಲಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 506 ಮತ್ತು 509 ಅಡಿ ಪ್ರಕರಣ ದಾಖಲಾಗಿದೆ. ಸ್ವಪ್ನಾ ಅವರ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಅದರಲ್ಲಿ ರಾವತ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಸಂಜಯ್​ ರಾವುತ್​ ನಿಕಟವರ್ತಿಗೆ ಬೆದರಿಕೆ ಆರೋಪ: ಪ್ರಕರಣ ಹಿಂಪಡೆದುಕೊಳ್ಳುವಂತೆ ಒತ್ತಡ

ಸಂಜಯ್ ರಾವತ್ ಆಪ್ತೆ ಸ್ವಪ್ನಾ ಪಾಟ್ಕರ್ 'ಪತ್ರಾ ಚಾಲ್ ಭೂ ಪ್ರಕರಣ'ದಲ್ಲಿ ಸಾಕ್ಷಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾವತ್ ಅವರನ್ನು ಅವರ ನಿವಾಸದಲ್ಲಿ ಭಾನುವಾರ ಬಂಧಿಸಿದೆ.

ಬಿಜೆಪಿಯವರು ಸಹೋದರನಿಗೆ ಹೆದರಿ ಬಂಧಿಸಿದ್ದಾರೆ. ಅವರು ನಮಗೆ ಯಾವುದೇ ದಾಖಲೆಗಳನ್ನು (ಅವರ ಬಂಧನಕ್ಕೆ ಸಂಬಂಧಿಸಿದಂತೆ) ನೀಡಿಲ್ಲ. ನಾಳೆ ಬೆಳಗ್ಗೆ 11.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾವತ್ ಸಹೋದರ ಸುನಿಲ್ ರಾವತ್ ಹೇಳಿದ್ದಾರೆ.

ಇದನ್ನೂ ಓದಿ:'ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ

ABOUT THE AUTHOR

...view details