ಕರ್ನಾಟಕ

karnataka

ETV Bharat / bharat

ಕಳ್ಳತನ ಪ್ರಕರಣ: ಎಸ್​ಪಿ ನಾಯಕ ಅಜಂ ಖಾನ್, ಪುತ್ರ ಅಬ್ದುಲ್ಲಾ ವಿರುದ್ಧ FIR - ಸರ್ಕಾರಿ ಯಂತ್ರಗಳನ್ನು ನಾಪತ್ತೆ ಮಾಡಿರುವ ಆರೋಪ

ಅಜಂ ಖಾನ್ ಹಾಗು ಅವರ ಮಗ ಅಬ್ದುಲ್ಲಾ ಅಜಂ ಸೇರಿದಂತೆ ಏಳು ಜನರ ವಿರುದ್ಧ ಸೋಮವಾರ ರಾಂಪುರ ನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸರ್ಕಾರಿ ಯಂತ್ರಗಳನ್ನು ಕಳ್ಳತನ ಮಾಡಿರುವ ಗಂಭೀರ ಆರೋಪ ಇವರ ಮೇಲಿದೆ.

samajwadi party leader azam khan son abdullah
ಅಜಂ ಖಾನ್, ಅಬ್ದುಲ್ಲಾ ವಿರುದ್ಧ ಎಫ್ಐಆರ್ ದಾಖಲು

By

Published : Sep 20, 2022, 10:50 AM IST

ರಾಂಪುರ (ಉತ್ತರಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಅಜಂ ಸೇರಿ 7 ಜನರ ವಿರುದ್ಧ ಸೋಮವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಖಾನ್ ಸೇರಿದಂತೆ ಇತರರು ಸರ್ಕಾರಿ ಯಂತ್ರಗಳನ್ನು ಕಳ್ಳತನ ಮಾಡಿ ಅವುಗಳನ್ನು ಜೌಹರ್ ವಿಶ್ವವಿದ್ಯಾಲಯದಲ್ಲಿ ಇಟ್ಟಿದ್ದಾರೆ ಎಂಬ ಆರೋಪವಿದೆ.

ಪುರಸಭೆಯ ಮಾಜಿ ಅಧ್ಯಕ್ಷ ಅಜರ್ ಖಾನ್ ಮತ್ತು ವಿಶ್ವವಿದ್ಯಾಲಯದ ಉಪಕುಲಪತಿ ಸುಲ್ತಾನ್ ಮೊಹಮ್ಮದ್ ಖಾನ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ:88 ಪ್ರಕರಣಗಳಲ್ಲಿ ಆರೋಪಿ ಈ ರಾಜಕಾರಣಿ: 27 ತಿಂಗಳ ನಂತರ ಜೈಲಿನಿಂದ ರಿಲೀಸ್​

ಜೌಹರ್ ವಿಶ್ವವಿದ್ಯಾಲಯದಲ್ಲಿ ನಡೆದ ಶೋಧ ಸಂದರ್ಭದಲ್ಲಿ ಪಾಲಿಕೆಯ ಸರ್ಕಾರಿ ಸ್ವಚ್ಛತಾ ಯಂತ್ರಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಐಪಿಸಿ ಸೆಕ್ಷನ್ 409, 120-ಬಿ, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 2 ಮತ್ತು 3 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details