ಗಯಾ: ಜಿಲ್ಲೆಯ ಇಮಾಮ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಂದಿನ ಡಿಎಸ್‌ಪಿ ಕಮಲಕಾಂತ್ ಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಿದು ಘಟನೆ...
ಘಟನೆ ನಡೆದು ನಾಲ್ಕು ವರ್ಷಗಳ ನಂತರ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣವು 2017ರಲ್ಲಿ ನಡೆದಿದೆ. ಆ ಸಮಯದಲ್ಲಿ ಮಾನವ ಕಳ್ಳಸಾಗಣೆ ತಡೆಗಟ್ಟುವ ಜವಾಬ್ದಾರಿಯನ್ನು ಅಂದಿನ ಪ್ರಧಾನ ಕಚೇರಿ ಡಿಎಸ್‌ಪಿ ಕಮಲಕಾಂತ್ ಪ್ರಸಾದ್ಗೆ ವಹಿಸಲಾಗಿತ್ತು. ಅವರ ನಾಯಕತ್ವದಲ್ಲಿ ಅನೇಕ ಹುಡುಗಿಯರನ್ನು ಬದ್ನಾಮ್ ನಗರದಿಂದ ರಕ್ಷಿಸಿದ್ದಾರೆ. ಇಮಾಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿ ಕಮಲಕಾಂತ್ ಅವರಿಗೆ ನೀಡಿದ್ದ ಸರ್ಕಾರಿ ಕ್ವಾಟ್ರಸ್ಗೆ ಕೆಲಸ ಮಾಡಲು ಬರುತ್ತಿದ್ದಳು. ಈ ವೇಳೆ ಕಮಲಕಾಂತ್ ಪ್ರಸಾದ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು ಎಂದು ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ರವಿ ರಂಜನಾ ಹೇಳಿದ್ದಾರೆ.
2017ರಲ್ಲಿ ದಸರಾ ಸಮಯದಲ್ಲಿ ಕ್ವಾಟ್ರಸ್ನಲ್ಲಿ ಕೆಲಸ ಮಾಡಲು ಬಂದ ಬಾಲಕಿ ಮೇಲೆ ಕಮಲಕಾಂತ್ ಪ್ರಸಾದ್ ಲೈಂಗಿಕ ಕೃತ್ಯ ಎಸಗಿದ್ದಾರೆ. ಕಮಲಕಾಂತ್ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ನೋಡಲಾಗದೇ ಪತ್ನಿ ವಿಡಿಯೋ ಮಾಡಿದ್ದಾರೆ. ಬಳಿಕ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ನ್ಯಾಯಾಲಯ ಕದ ತಟ್ಟಿದ್ದಾರೆ ಎಂದು ಗಯಾ ಜಿಲ್ಲೆಯ ಎಸ್‌ಎಸ್‌ಪಿ ಆದಿತ್ಯ ಕುಮಾರ್ ಹೇಳಿದ್ದಾರೆ.
ಸಿಐಡಿಗೆ ಆರೋಪದ ಸಾಕ್ಷಿಗಳನ್ನು ಹಸ್ತಾಂತರಿಸಲಾಗಿದ್ದು, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಗಯಾ ವಿಶೇಷ ಪೋಕ್ಸೋ ನ್ಯಾಯಾಧೀಶ ನೀರಜ್ ಕುಮಾರ್ ಅವರ ಸೂಚನೆಯ ಮೇರೆಗೆ ಮಂಗಳವಾರ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ. ಆರೋಪಿ ಡಿಎಸ್‌ಪಿ ಕೂಡ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದ್ದು, ಸಿಐಡಿ ಈ ಸಂಪೂರ್ಣ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರೋಪಿ ಡಿಎಸ್‌ಪಿ ಕಮಲಕಾಂತ್ ಪ್ರಸಾದ್ ಪ್ರಸ್ತುತ ಕಾನ್ಸ್ಟೇಬಲ್ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮೇ 27ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಒಟ್ನಲ್ಲಿ ನಾಲ್ಕು ವರ್ಷಗಳ ಬಳಿಕ ಈ ಪ್ರಕರಣ ಮರುಜೀವ ಪಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.